ಮುಲ್ಕಿ:ಫ್ರೆಂಡ್ಸ್ ಸಂತೆಕಟ್ಟೆ ಕ್ರಿಕೆಟ್ ತಂಡ ಆಯೋಜಿಸಿದ್ದ "ಸಂತೆಕಟ್ಟೆ ಪ್ರೀಮಿಯರ್ ಲೀಗ್" ಪಂದ್ಯಾವಳಿಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಶಿಕಾ ಗ್ರೂಪ್ ಮುಖ್ಯಸ್ಥ ಉದ್ಯಮಿ ಇರ್ಫಾನ್ ಕಾರ್ನಾಡ್ ಮಾತನಾಡಿ, ಯುವಜನರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಸದೃಢವಾಗುವುದರ ಜೊತೆಗೆ ಮಾನಸಿಕವಾಗಿಯೂ ಗಟ್ಟಿಯಾಗುತ್ತಾರೆ ಎಂದರು.
ಮಾಜಿ ತಾ ಪಂ ಸದಸ್ಯ ಮನ್ಸೂರ್ ಸಾಗ್ ,ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ಅಶ್ರಫ್ ಪಡುಪಣಂಬೂರು ಮಾತನಾಡಿದರುವೇದಿಕೆಯಲ್ಲಿ ಸ್ಥಳೀಯ ಕ್ರೀಡಾ ಪೋಷಕರಾದ ಉದ್ಯಮಿ ಬಶೀರ್ ಕಲ್ಲಾಪು, ಅಬ್ದುಲ್ ರೆಹಮಾನ್ ಕುಡುಂಬೂರು, ರಮೀಝ್ ಸಂತ ಕಟ್ಟೆ, ಖಾದರ್ ಕೋಡಿಕಲ್, ಹನೀಫ್ ತಾಯಿಫ್ , ಸರಫ್ ಉಚ್ಚಿಲ ಪ್ರವೀಣ್, ರಫೀಕ್ ಸಾಗ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಜಯಗಳಿಸಿ ಕುಡುಂಬೂರು ವಾರಿಯರ್ಸ್ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡು ದ್ವಿತೀಯ ಬಹುಮಾನವನ್ನು ಗ್ಲಾಡಿಯೇಟರ್ಸ್ ಸಂತೆಕಟ್ಟೆ ತಂಡ ಪಡೆದುಕೊಂಡಿತು.
ಟೂರ್ನಮೆಂಟಿನ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೌರೀಶ ತೋಕೂರು, ಸರಣಿ ಶ್ರೇಷ್ಠ ರಾಗಿ ಅನೀಶ್ ಕದಿಕೆ, ಉತ್ತಮ ದಾಂಡಿಗ ರಾಗಿ ವಿಶಾಲ್ ತೋಕೂರು, ಉತ್ತಮ ಎಸೆತಗಾರ ರಾಗಿ ಸುರೇಂದ್ರ ಪಾವಂಜೆ, ಉತ್ತಮ ಗೂಟರಕ್ಷಕ ರಾಗಿ ಸಮದ್ ಸಾಗ್ ಬಹುಮಾನ ಪಡೆದುಕೊಂಡರು
Kshetra Samachara
21/03/2022 07:02 pm