ಮುಲ್ಕಿ:ಅಭಿವೃದ್ದಿ ಪಥದಲ್ಲಿರುವ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜನ ಸಮಾನ್ಯರಿಗೆ ಹೊರೆಯಾಗದಂತೆ ಭೂ ಸಂಬಂಧದ ಇ. ಖಾತೆಗಳು ಸರಳೀಕೃತರೀತಿಯಲ್ಲಿ ನಿರ್ವಹಣೆ ಆಗಬೇಕು. ಈ ನಿಟ್ಟಿನಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸ ಆಗಬೇಕೆಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಜರಗಿದ ಪಟ್ಟಣ ಪಂಚಾಯತ್ ಸಭೆಯಲ್ಲಿ ಅವರು ಮಾತನಾಡಿದರು.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕ ಗುರು ಪ್ರಸಾದ್ ಮಾತನಾಡಿ ಇ ಖಾತೆಯು ಹಿಂದಿನ ಗ್ರಾಮ ಪಂಚಾಯತ್ ತರ ಇರುವುದಿಲ್ಲ ಪಟ್ಟಣ ಪಂಚಾಯತ್ ನಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಯಿದ್ದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮಂಗಳೂರು ಮೂಡಾ ವ್ಯಾಪ್ತಿಗೆ ಬರುತ್ತಿದ್ದು ವಾರದಲ್ಲಿ ಒಂದು ದಿನ ಕಿನ್ನಿಗೋಳಿಯಲ್ಲಿ ಇ ಖಾತಾ ಯೋಜನೆಯ ಸಿಬಂದಿ ಬಂದು ಇ .ಖಾತೆಯ ನಿರ್ವಹಣೆ ಪೈಲ್‌ಗಳನ್ನು ವಿಲೇವಾರಿ ಮಾಡಲಾಗುವುದು ಇದರಿಂದ ಜನರಿಗೆ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಮೂಡಬಿದಿರೆ ಮೂಡಾದ ಅಧ್ಯಕ್ಷ ಮೇಘನಾಥ ಶೆಟ್ಟಿ , ಮಾಜಿ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮಾಹಿತಿ ನೀಡಿದರು. ಜಿ. ಪಂ ಮಾಜಿ ಸದಸ್ಯ ಈಶ್ವರ್ ಕಟೀಲು,ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ , ಜಿ ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ , ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಜಿ ಪಂ ಮಾಜಿ ಸದಸ್ಯೆ ಶೈಲಾ ಸಿಕ್ವೇರಾ, ತಾ. ಪಂ ಮಾಜಿ ಸದಸ್ಯರಾದ ಶುಭಲತಾ ಶೆಟ್ಟಿ , ದಿವಾಕರ ಕರ್ಕೇರಾ, ಮಾಜಿ ಸದಸ್ಯರಾದ ಜನಾರ್ದನ ಕಿಲೆಂಜೂರು, ಸಂತೋಷ್ ಕುಮಾರ್ , ಧನಂಜಯ ಶೆಟ್ಟಿಗಾರ್ , ಕಲ್ಪೆಶ್ ಶೆಟ್ಟಿ , ಪ್ರೇಮ್‌ರಾಜ್ ಶೆಟ್ಟಿ . ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಉಪಸ್ಥಿತರಿದ್ದರು.
Kshetra Samachara
09/09/2021 05:26 pm