ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಕೆಲವು ರೋಗಿಗಳು ಗುಣಮುಖರಾದರೂ ಅಸಹಾಯಕತೆಯ ಕಾರಣದಿಂದ ಆಸ್ಪತ್ರೆಯಲ್ಲಿಯೇ ಉಳಿದಿದ್ರು. ತಾವು ಅನಾಥರು , ತಮಗೆ ನೆಲೆ ಇಲ್ಲ, ಇಲ್ಲಿಂದ ಹೋಗುವುದಾದರೂ ಎಲ್ಲಿಗೆ ಎನ್ನುವ ಕಾರಣ ನೀಡುತ್ತಿದ್ದರು. ಹೈಕೋರ್ಟ್ ನ್ಯಾಯಾಧೀಶರ ಆದೇಶದ ಮೇರೆಗೆ ಜಿಲ್ಲಾಡಳಿತವು ಜಿಲ್ಲಾಸ್ಪತ್ರೆಯಲ್ಲಿ ನೆಲೆಕಂಡಿರುವ ಅನಾಥ ವ್ಯಕ್ತಿಗಳನ್ನು ಪುರ್ನವಸತಿ ಕೇಂದ್ರಗಳಿಗೆ ದಾಖಲುಪಡಿಸಲು ವ್ಯವಸ್ಥೆಗೊಳಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾಗಿದ್ದ ವ್ಯಕ್ತಿಯೊಬ್ಬರು ಅನಾಥ ಸ್ಥಿತಿ ಎದುರಾದ್ದರಿಂದ ಆಸ್ಪತ್ರೆಯಲ್ಲಿಯೇ ನೆಲೆಕಂಡಿದ್ದರು. ಆದರೆ ಜಿಲ್ಲಾಡಳಿತದ ಹೊಸ ಆದೇಶ ಆ ವ್ಯಕ್ತಿಯ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.ಅನಾಥ ವ್ಯಕ್ತಿಯನ್ನು ಉದ್ಯಾವರದ ಹಿರಿಯ ನಾಗರೀಕರ ಕನಸಿನ ಮನೆಗೆ ಹಿರಿಯ ನಾಗರಿಕರ ಸಹಾಯವಾಣಿ ಸಿಬ್ಬಂದಿ ದಾಖಲುಪಡಿಸಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಎಂದಿನಂತೆ ಈ ಕಾರ್ಯದಲ್ಲಿ ಇಲಾಖೆಗೆ ನೆರವಾದರು.
PublicNext
14/09/2022 07:54 pm