ಕೊಲ್ಲೂರು: ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಗೌರವಾರ್ಥ ಸಲಾಂ ಮಂಗಳಾರತಿ ಎಂಬ ಹೆಸರಿನ ಪೂಜೆ ನಡೆಯುತ್ತಿತ್ತೇ ? ಎಂಬ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೈಂದೂರು ಶಾಸಕ ಮತ್ತು ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಸುಕುಮಾರ್ ಶೆಟ್ಟಿ, ನಾನು 40 ವರ್ಷಗಳಿಂದಲೂ ಕೊಲ್ಲೂರು ದೇವಸ್ಥಾನದ ಭಕ್ತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹತ್ತು ವರ್ಷಗಳ ಕಾಲ ಆಡಳಿತ ಮೊಕ್ತೇಸರನಾಗಿದ್ದವನು.ಕೊಲ್ಲೂರಿನಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ಇಲ್ಲ ಎಂದು ಹೇಳಿದ್ದಾರೆ.
ಕೊಲ್ಲೂರಿನಲ್ಲಿ ಸಂಜೆ ವೇಳೆ ಆಗುವ ಮಂಗಳಾರತಿ ಅದು ಪ್ರದೋಷ ಪೂಜೆ. ಅದು ಸಲಾಂ ಮಂಗಳಾರತಿ ಎನ್ನುವುದಕ್ಕೆ ಯಾವುದೇ ದಾಖಲೆಗಳು ಲಿಖಿತ ರೂಪದಲ್ಲಿ ಇಲ್ಲ. ಪ್ರದೋಷ ಪೂಜೆ ಎಂದಿಗೂ ಸಲಾಂ ಆಗಲು ಸಾಧ್ಯವಿಲ್ಲ.
ಪ್ರದೋಷ ಪೂಜೆಯನ್ನ ನಾವು ಸಲಾಂ ಎಂದು ಒಪ್ಪಲು ಸಾಧ್ಯವೂ ಇಲ್ಲ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
PublicNext
08/10/2022 06:55 pm