ಉಳ್ಳಾಲ: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಸೆ.6ರಿಂದ ಕಲ್ಲಾಪುವಿನಿಂದ ಮುಡಿಪುವಿನ ತನಕ ಕಾಂಗ್ರೆಸ್ ವತಿಯಿಂದ ಐಕ್ಯತಾ ತಿರಂಗಾ ಯಾತ್ರೆ ನಡೆಯಲಿದ್ದು, ಜನರು ಹಾಕುವ ಒಂದೊಂದು ಹೆಜ್ಜೆಯೂ ನೋವಿನಿಂದ ಕೂಡಿರುತ್ತದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ಹೇಳಿದರು.
ಇಂದು ತೊಕ್ಕೊಟ್ಟಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರುಷಗಳಾದರೂ ಜನರು ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಬೆಲೆ ಏರಿಕೆ, ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ ಸಮಸ್ಯೆಗಳು ಜನರನ್ನು ಹೈರಾಣಾಗಿಸಿದೆ.
ಈ ನಿಟ್ಟಿನಲ್ಲಿ ಸೆ.6ರಂದು ಮಧ್ಯಾಹ್ನ 12:30ಕ್ಕೆ ಕಲ್ಲಾಪುವಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಳಿಕ ನಡೆಯುವ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದು, ಮುಡಿಪುವಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಲಿಖಿತ್ ಮೌರ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
PublicNext
05/09/2022 09:35 pm