ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ಬಿಎಸ್ವೈ ಪರ ಘೋಷಣೆ; ಅಭಿಮಾನಿಗಳಿಂದ ಮುಗಿಲು ಮುಟ್ಟಿದ ಜಯಘೋಷ

ಮಂಗಳೂರು: ನಗರದಲ್ಲಿ ನಿನ್ನೆ ನಡೆದ ಸಿಎಂ ನರೇಂದ್ರ ಮೋದಿಯವರ ಸರ್ಕಾರದ ಅಧಿಕೃತ ಕಾರ್ಯಕ್ರಮವಾದರೂ ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರೂ ಉಪಸ್ಥಿತರಿದ್ದರು‌. ಪ್ರಧಾನಿ ಮೋದಿಯವರು ವೇದಿಕೆಗೆ ಆಗಮಿಸುತ್ತಿದ್ದಂತೆ ಸ್ವಾಗತ ಕೋರುವ ವೇಳೆ ಬಿವೈಎಸ್ ಹೆಸರು ಹೇಳುತ್ತಿದ್ದಂತೆ ಅವರ ಪರವಾಗಿ ಜನರಿಂದ ಮುಗಿಲು ಮುಟ್ಟಿದ ಜಯಘೋಷ ಕೇಳಿ ಬಂದಿತ್ತು.

ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬರುವ ವೇಳೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪ್ರಚಾರದ ಮೊದಲ ವೇದಿಕೆ ಎಂದೇ ಈ ಕಾರ್ಯಕ್ರಮ ಬಿಂಬಿತವಾಗಿದೆ. ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು, 2ಲಕ್ಷಕ್ಕೂ ಮೀರಿ ಸೇರಿರುವ ಜನತೆಯ ನಡುವೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ವೈ ಹೆಸರು ಬರುತ್ತಿದ್ದಂತೆ ಜನರ ಹರ್ಷೋದ್ಘಾರ ಮೇರೆ ಮೀರುತ್ತಿತ್ತು. ಸರ್ಕಾರಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ವೇದಿಕೆಯಲ್ಲಿ ಸ್ಥಾನ ಪಡೆಯಲು ಪ್ರಧಾನಿ ಮೋದಿಯವರ ವೈಯಕ್ತಿಕ ಆಹ್ವಾನವೇ ಕಾರಣ ಎನ್ನಲಾಗಿದೆ.

ಇತ್ತೀಚೆಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವ ಬಿಎಸ್ ಯಡಿಯೂರಪ್ಪ ಅವರು ವೇದಿಕೆಗೆ ಬಂದಾಗ ಜನರು ಹರ್ಷೋದ್ಧಾರ ಮಾಡಿದರು. ಅಲ್ಲದೆ ಪ್ರಧಾನಿ ಮೋದಿ ವೇದಿಕೆಗೆ ಆಗಮಿಸಿದ ಬಳಿಕ ಸ್ವಾಗತ ಕೋರುವ ವೇಳೆ ಬಿಎಸ್ ವೈ ಹೆಸರು ಬಂದಾಗ ಜನರು ಜಯಘೋಷ ಕೂಗಿದರು. ಇದನ್ನು ಪ್ರಧಾನಿ ಮೋದಿಯವರ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಯವರ ಎದುರುಗಡೆ ಅಭಿಮಾನಿಗಳು ರಾಜ್ಯದಲ್ಲಿ ಯಡಿಯೂರಪ್ಪನವರ ವರ್ಚಸ್ಸು ಪ್ರಕಟವಾಯಿತು ಎಂಬಂತೆ ವ್ಯಾಖ್ಯಾನಿಸಲಾಗುತ್ತಿದೆ.

Edited By : Manjunath H D
PublicNext

PublicNext

03/09/2022 10:11 am

Cinque Terre

53.22 K

Cinque Terre

6

ಸಂಬಂಧಿತ ಸುದ್ದಿ