ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಮಿಷನ್ ಆರೋಪ ನ್ಯಾಯಾಂಗ ತನಿಖೆಯಾಗಲಿ; ಉಮಾಶ್ರೀ

ಮುಲ್ಕಿ: ರಾಜ್ಯ ಸರ್ಕಾರ 40% ಗುತ್ತಿಗೆಯಲ್ಲಿ ಕಮಿಷನ್ ಪಡೆಯುತ್ತಿರುವ ಬಗ್ಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಯಬೇಕು ಮಾಜಿ ಸಚಿವೆ ಉಮಾಶ್ರೀ ಒತ್ತಾಯಿಸಿದ್ದಾರೆ.

ಅವರು ಮುಲ್ಕಿಯಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಮಾಧ್ಯಮದ ಜೊತೆ ಮಾತನಾಡಿ ಕೆಂಪಣ್ಣನವರ ಆರೋಪದ ಬಗ್ಗೆ ಸ್ಪಷ್ಟನೆ ನೀಡಲಿ ಅಥವಾ ನ್ಯಾಯಾಂಗ ತನಿಖೆಗೆ ನಡೆಯಲಿ. ಬಿಜೆಪಿ ಸರಕಾರದ ಲೂಟಿಕೋರರ ಇನ್ನೊಂದು ಭಾಗವಾಗಿ ಶಿಕ್ಷಣದಲ್ಲೂ ಕಮಿಷನ್ ಆರೋಪ ಕೇಳಿ ಬಂದಿದ್ದು, ಈ ಹಿಂದೆ ಕೊರೊನಾ ದಿನಗಳಲ್ಲಿ ಕೋಟಿಗಟ್ಟಲೆ ಲೂಟಿ ಹೊಡೆದಿದ್ದರೂ ಎಲ್ಲಾ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ

ಬಿಜೆಪಿ ಆಡಳಿತಕ್ಕೆ ಬಂದದ್ದು ಜನಸೇವೆ ಮಾಡಲು ಅಲ್ಲ ಲೂಟಿ ಮಾಡಲು ಎಂದು ಗಂಭೀರ ಆರೋಪ ಮಾಡಿದ ಅವರು ನೈತಿಕತೆ ಇದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಮಾಜೀ ಸಚಿವೆ ಉಮಾಶ್ರೀ ಸವಾಲೆಸೆದರು.

Edited By : Nagesh Gaonkar
PublicNext

PublicNext

28/08/2022 03:58 pm

Cinque Terre

38.28 K

Cinque Terre

1

ಸಂಬಂಧಿತ ಸುದ್ದಿ