ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಮತ್ಸ್ಯ ಕ್ರಾಂತಿಗೆ ಸಿದ್ಧತೆ : ಮೀನುಪ್ರಿಯರಿಗೆ ಊಟದ ಹೋಟೆಲ್ ಆರಂಭ..ಸಚಿವ ಅಂಗಾರ

ಸುಳ್ಯ: ರಾಜ್ಯದಲ್ಲಿ ಮತ್ಸ್ಯ ಕ್ರಾಂತಿಗೆ ಸರ್ಕಾರ ಐದು ಯೋಜನೆಗಳನ್ನು ಹಾಕಿಕೊಂಡಿದೆ. ಆ ಮೂಲಕ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಮತ್ಸ್ಯ ಕ್ರಾಂತಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ ಹೇಳಿದ್ದಾರೆ.

ಮೀನು ಊಟದ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಒದಗಿಸುವ ಸಲುವಾಗಿ ತಾಲೂಕು ಮಟ್ಟದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೀನು ಊಟದ ಹೋಟೆಲ್ ಗಳನ್ನು ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಆರು ಕಡೆಗಳಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಜಾಗದಲ್ಲಿ ಆರಂಭಿಸಲಾಗುತ್ತದೆ ಎಂದು ಅಂಗಾರ ತಿಳಿಸಿದರು.

ರಾಜ್ಯದಲ್ಲಿರುವ ಜಲಾಶಯಗಳಲ್ಲಿ ಮೀನು ಉತ್ಪಾದನೆ ಕುಂಟುತ್ತಾ ಸಾಗುತ್ತಿದ್ದು, ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಮೀನು ಮರಿ ಉತ್ಪಾದನೆ ರಾಜ್ಯದಲ್ಲಿ ನಿಂತು ಹೋಗುತ್ತಿದ್ದು, ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಆದ್ದರಿಂದ ರಾಜ್ಯದಲ್ಲಿಯೇ ಮೀನು ಮರಿ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ. ಆಲಮಟ್ಟಿ ಜಲಾಶಯದ ಸಮೀಪ 25 ಎಕರೆ ಜಾಗ ಸಿಕ್ಕಿದೆ.

ಅದೇ ರೀತಿಯಲ್ಲಿ ಬೇರೆ ಬೇರೆ ಜಲಾಶಯಗಳ ಬಳಿಯಲ್ಲೂ ಮೀನು ಮರಿ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು ಎಂದರು. ಆಯಾ ಜಿಲ್ಲೆಯ ಅಗತ್ಯಗಳಿಗೆ ತಕ್ಕಂತೆ ಆಯಾ ಜಿಲ್ಲೆಗಳ ವಿಶಿಷ್ಟ ಮೀನಿನ ತಳಿಗಳನ್ನು ಅಭಿವೃದ್ದಿಪಡಿಸುವುದು ನಮ್ಮ ಉದ್ದೇಶ ಎಂದು ವಿವರಿಸಿದರು.

ಒಳನಾಡಿನಲ್ಲಿಯೂ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಎಲ್ಲೆಲ್ಲಿ ಮೀನು ಉತ್ಪಾದನೆಗೆ ಸಾಧ್ಯವೋ ಅದೆಲ್ಲವನ್ನೂ ಮಾಡಲಾಗುತ್ತದೆ. ಗ್ರಾಹಕರಿಗೆ ಉತ್ತಮ ದರ್ಜೆಯ ಮೀನು ಕರಾವಳಿ ಮಾತ್ರವಲ್ಲದೇ ಒಳನಾಡಿನಲ್ಲಿಯೂ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವೆಂದು ಸಚಿವ ಅಂಗಾರ ಹೇಳಿದರು.

ಮೀನುಗಾರಿಕೆ ಜತೆಗೆ ಮಾರುಕಟ್ಟೆ ಒದಗಿಸುವುದೂ ಅಷ್ಟೇ ಮುಖ್ಯವಾಗಿದ್ದು, ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನು ಹರಾಜು ಮುಗಿದ ಕೂಡಲೇ ಬೆಳಗ್ಗೆ 7 ಗಂಟೆ ಒಳಗೆ ಎಲ್ಲ ತಾಲೂಕುಗಳಿಗೆ ಮೀನು ತಲುಪಿಸಲಾಗುತ್ತ

Edited By : Nirmala Aralikatti
PublicNext

PublicNext

18/08/2022 06:58 pm

Cinque Terre

24.09 K

Cinque Terre

1

ಸಂಬಂಧಿತ ಸುದ್ದಿ