ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬೈಕಂಪಾಡಿಯಲ್ಲಿ ನಾಥೂರಾಂ ಗೋಡ್ಸೆ ಬ್ಯಾನರ್ ಅಳವಡಿಕೆ!

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬೆನ್ನಲ್ಲೇ ವೀರ್ ಸಾವರ್ಕರ್ ಫೋಟೋ ವಿವಾದ ಅಲ್ಲಲ್ಲಿ ಭುಗಿಲೆದ್ದ ಬೆನ್ನಲ್ಲೇ ಮಂಗಳೂರಿನ ಬೈಕಂಪಾಡಿಯಲ್ಲಿ ಹಾಕಲಾಗಿರುವ ಬ್ಯಾನರ್ ನಲ್ಲಿ ನಾಥೂರಾಂ ಗೋಡ್ಸೆ ಫೋಟೋ ಅಳವಡಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೈಕಂಪಾಡಿ ಜಂಕ್ಷನ್ ನಲ್ಲಿ ಶುಭಾಶಯ ಕೋರಿ ಬ್ಯಾನರ್ ಅವಳಡಿಸಿದ್ದಾರೆ. ಈ ಬ್ಯಾನರ್ ನಲ್ಲಿ ಮೇಲ್ಗಡೆ ನಾಥೂರಾಂ ಗೋಡ್ಸೆ ಹಾಗೂ ವೀರ ಸಾವರ್ಕರ್ ಫೋಟೋ ಅಳವಡಿಸಲಾಗಿದೆ. ಅಲ್ಲದೆ ರಾಜಕೀಯವನ್ನು ಹಿಂದುತ್ವಗೊಳಿಸಿ ಹಿಂದೂಗಳನ್ನು ಸೈನಿಕೀಕರಣಗೊಳಿಸಿ ಎಂಬ ಬರಹವನ್ನು ಬರೆಯಲಾಗಿದೆ. ಈ ಬ್ಯಾನರ್ ಬೈಕಂಪಾಡಿಯ ಜಂಕ್ಷನ್ ನಲ್ಲಿ ಅಳವಡಿಸಲಾಗಿದೆ.

Edited By : Manjunath H D
PublicNext

PublicNext

18/08/2022 03:43 pm

Cinque Terre

35.35 K

Cinque Terre

9

ಸಂಬಂಧಿತ ಸುದ್ದಿ