ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕೊಲೆಯಾದ ಪ್ರವೀಣ್ ಮನೆಗೆ ಸಂಸದ ಕಟೀಲ್ ಭೇಟಿ: ಧಿಕ್ಕಾರ ಕೂಗಿದ ಕಾರ್ಯಕರ್ತರು

ಬೆಳ್ಳಾರೆ: ಮಂಗಳವಾರ ರಾತ್ರಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ಯಾತ್ರೆ ಬೆಳ್ಳಾರೆಗೆ ಆಗಮಿಸಿದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ,ಸಚಿವ ಅಂಗಾರ ಶಾಸಕ ಸಂಜೀವ ಮಠಂದೂರು ಹಾಗು ಬಿಜೆಪಿ ನಾಯಕರ ವಿರುದ್ಧ ಸಾವಿರಾರು ಮಂದಿ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

ಘೇರಾವ್ ಹಾಕಿದ ಸಾವಿರಾರು ಮಂದಿ ಅವರ ವಿರುದ್ಧ ಧಿಕ್ಕಾರ ಕೂಗಿದರು. ಧಿಕ್ಕಾರ ಕೂಗಿ, ಗೋ ಬ್ಯಾಕ್ ಕೂಗಿ ಸೇರಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ನಾಯಕರನ್ನು ದಿಗ್ಬಂಧನಕ್ಕೊಳಪಡಿಸಿದರು. ನ್ಯಾಯಕ್ಕಾಗಿ ಒತ್ತಾಯಿಸಿದರು. ಸರಕಾರದ ವಿರುದ್ಧ, ಬಿಜೆಪಿ ನಾಯಕರ, ಸಚಿವರ ವಿರುದ್ಧ ಸಾವಿರಾರು ಕಾರ್ಯಕರ್ತರು ನ್ಯಾಯಕ್ಕಾಗಿ ಒತ್ತಾಯ ಮಾಡಿದರು. ಈ ಮಧ್ಯೆ ಪಾರ್ಥಿವ ಶರೀರದ‌ ಮೆರವಣಿಗೆ ಮುಂದೆ ಸಾಗಿತು. ಆದರೆ ಕಾರ್ಯಕರ್ತರು ನಾಯರಕರ ದಿಗ್ಬಂಧನ ಮುಂದುವರಿಸಿ ಹಲವು ಸಮಯಗಳ ಕಾಲ ಗೋ ಬ್ಯಾಕ್, ಧಿಕ್ಕಾರ , ಶೇಮ್, ಶೇಮ್ ಎಂದು ಘೋಷಣೆ ಕೂಗಿದರು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ನಾಯಕರು ಪ್ರಯತ್ನಿಸಿದರೂ ವಿಫಲರಾದರು. ನಾಯಕರ ವಿರುದ್ಧ ನೆರೆದ ಸಾವಿರಾರು ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆಯಿತು.

Edited By :
PublicNext

PublicNext

27/07/2022 02:50 pm

Cinque Terre

49.77 K

Cinque Terre

13

ಸಂಬಂಧಿತ ಸುದ್ದಿ