ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದು ಕರ್ನಾಟಕದ ಸಮಸ್ತ ಜನತೆಗೆ ಹೆಮ್ಮೆಯ ವಿಚಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು ಅವರು ಹೇಳಿದ್ದಾರೆ.
ಧಾರ್ಮಿಕ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಅತ್ಯಪೂರ್ವ ಕೊಡುಗೆ ನೀಡಿರುವ ಡಾ.ಹೆಗ್ಗಡೆಯವರ ಜ್ಞಾನ, ಅನುಭವ ರಾಜ್ಯಸಭೆಗೆ ವರದಾನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು ಅವರು ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ದೇಶದ ಹೆಮ್ಮೆಯ ಅಥ್ಲಿಟ್ ಪಿ.ಟಿ.ಉಷಾ, ಚಿತ್ರ ಕಥೆಗಾರ ವಿ.ವಿಜಯೇಂದ್ರ
ಮತ್ತು ಸಂಗೀತ ದಿಗ್ಗಜ ಇಳಯರಾಜ ಅವರುಗಳನ್ನು ನಳಿನ್‌ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ.
Kshetra Samachara
06/07/2022 10:11 pm