ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಶೂನ್ಯ ಎಂದು ಮಾಜಿ ಶಾಸಕ ಮೊಯುದ್ದಿನ್ ಭಾವ ಆರೋಪಿಸಿದ್ದಾರೆ.
ಅವರು ಸುರತ್ಕಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕ ಭರತ್ ಶೆಟ್ಟಿ ಸ್ಮಾರ್ಟ್ ಸಿಟಿ ಮಾಡುತ್ತೇನೆ ಎಂದು ಹೇಳಿ ಕೊಚ್ಚಿಕೊಳ್ಳುತ್ತಿದ್ದಾರೆ ವಿನಹ ಯಾವುದೇ ಅಭಿವೃದ್ಧಿ ಕೆಲಸ ಸಾಧಿಸಿಲ್ಲ.
ಸ್ಮಾರ್ಟ್ ಸಿಟಿಯ ಹಣೆಬರಹ ಮಂಗಳೂರಿನ ಕೊಟ್ಟಾರ ಚೌಕಿ ಹಾಗೂ ಸುರತ್ಕಲ್ ನ ಬೈಲಕೆರೆ ಬಳಿ ನಿನ್ನೆ ಸುರಿದ ಬಾರಿ ಮಳೆಗೆ ಜನತೆಗೆ ತಿಳಿದು ಬಂದಿದ್ದು ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.
ಸುರತ್ಕಲ್ ಎನ್ ಐ ಟಿ ಕೆ ಟೋಲ್ ಬಗ್ಗೆ ಮಾತನಾಡಿದ ಮೊಯುದ್ದಿನ್ ಭಾವ ಈಗಿನ ಶಾಸಕರು ಅನಗತ್ಯವಾಗಿ ಟೋಲ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ತಾಕತ್ತಿದ್ದರೆ ನನ್ನ ಎದುರಿಗೆ ನಿಂತು ಮಾತನಾಡಲಿ ಎಂದು ಚಾಲೆಂಜ್ ಮಾಡಿದರು.ರಾಜಸ್ಥಾನದಲ್ಲಿ ನಡೆದ ಬರ್ಬರ ಹತ್ಯೆಯನ್ನು ಖಂಡಿಸಿದ ಭಾವ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಏರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು
Kshetra Samachara
01/07/2022 08:36 pm