ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಶ್ವಕರ್ಮ ಸಮಾಜ ಒಡೆಯಲು ಸಚಿವ ಪೂಜಾರಿ ಪಿತೂರಿ: ನೇರಂಬಳ್ಳಿ ರಮೇಶ್ ಆಚಾರ್ ಆರೋಪ

ಉಡುಪಿ: ವಿಶ್ವಕರ್ಮ ಸಮಾಜವನ್ನು ಇಬ್ಭಾಗ ಮಾಡಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪಿತೂರಿ ನಡೆಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್' ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ವಿಶ್ವಕರ್ಮ ಸಮಾಜವು ಸಂಪೂರ್ಣವಾಗಿ ವಿಶ್ವಕರ್ಮ ನಾಯಕರಾದ ಕೆ.ಪಿ. ನಂಜುಂಡಿ ಯವರ ನಾಯಕತ್ವದಲ್ಲಿ ಸಮಾಜ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ಇದು ತಿಳಿದಿದ್ದರೂ ಯಾರದ್ದೋ ಕುತಂತ್ರದಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜವನ್ನು ಇಬ್ಬಾಗ ಮಾಡಲು ಭ್ರಷ್ಟಾಚಾರ ಎಸಗಿ ಎಸಿಬಿ ವಿಚಾರಣೆಗೆ ಗುರಿಯಾಗಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಅವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರೂ ಅವರು ನಿರ್ಲಕ್ಷ್ಯ ವಹಿಸಿ ಸಮಾಜದ ಕೆಲವೇ ಕೆಲವು ಮಂದಿ ಸ್ವಾಮೀಜಿಗಳಿಗೆ ಬಾಬು ಪತ್ತಾರ ಮೂಲಕ ಮಠಗಳಿಗೆ ಅನುದಾನ ನೀಡುವುದಾಗಿ ಆಮಿಷವೊಡ್ಡಿ ಜೂ.24ರಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆ ನಡೆಸಿ ಸಮಾಜಕ್ಕೆ ಮುಜುಗರ ಉಂಟುಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಪಕ್ಷ ಹಾಗೂ ಮುಖ್ಯಮಂತ್ರಿಗಳು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಿಳಿವಳಿಕೆ ಮೂಡಿಸಬೇಕು ಎಂದರು.

Edited By : Manjunath H D
Kshetra Samachara

Kshetra Samachara

29/06/2022 02:27 pm

Cinque Terre

8.79 K

Cinque Terre

0

ಸಂಬಂಧಿತ ಸುದ್ದಿ