ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ರಾಹುಲ್,ಸೋನಿಯಾರನ್ನ ತಡೆಯಲು ಬಿಜೆಪಿಗೆ ಈ ಜನ್ಮದಲ್ಲೇ ಸಾಧ್ಯವಿಲ್ಲ.!

ಉಳ್ಳಾಲ: ಇಡಿ ಯನ್ನ ಛೂ ಬಿಟ್ಟು ರಾಹುಲ್ ಮತ್ತು ಸೋನಿಯಾ ಗಾಂಧಿಯವರನ್ನ ತಡೆಯಲು ಬಿಜೆಪಿಗೆ ಜನ್ಮದಲ್ಲಿ ಸಾಧ್ಯವಿಲ್ಲವೆಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಹೇಳಿದರು.

ರಾಹುಲ್ ಗಾಂಧಿ ಮೇಲೆ ಇಡಿ ಅಸ್ತ್ರ ಪ್ರಯೋಗ,ಪ್ರವಾದಿ ಮೊಹಮ್ಮದ್ ಬಗ್ಗೆ ನಿಂದನೆ ಮಾಡಿದ ನೂಪುರ್ ಶರ್ಮಾ ಧರ್ಮ ವಿರೋಧಿ ಹೇಳಿಕೆ ಹಾಗೂ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟುವಿನಲ್ಲಿ ಮಂಗಳವಾರದಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಪ್ರಕರಣ ಖುಲಾಸೆಗೊಂಡರೂ ಕೂಡಾ ಅದನ್ನೇ ಅಸ್ತ್ರವನ್ನಾಗಿಸಿ ಇಡಿ ಮೂಲಕ ಬೇಳೆ ಬೇಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.ರಾಹುಲ್ ಮತ್ತು ಸೋನಿಯಾ ಗಾಂಧಿಯವರ ಜನಪ್ರಿಯತೆಯನ್ನ ಸಹಿಸಲಾರದ ಬಿಜೆಪಿ ಈ ರೀತಿಯ ಹೇಯ ರಾಜಕೀಯ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಈಶ್ವರ ಉಳ್ಳಾಲ್ ,ಪ್ರಮುಖರಾದ ಎನ್.ಎಸ್ ಕರೀಂ,ಸುರೇಖಾ ಚಂದ್ರಹಾಸ್,ನಾಸೀರ್ ಸಾಮಣಿಗೆ,ದೀಪಕ್ ಪಿಲಾರ್,ಝಕರಿಯಾ ಮಲಾರ್,ಸುರೇಶ್ ಭಟ್ನಗರ್,ಚಂದ್ರಿಕಾ ರೈ,ಸಪ್ನ ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Edited By :
Kshetra Samachara

Kshetra Samachara

21/06/2022 09:05 pm

Cinque Terre

12.21 K

Cinque Terre

3

ಸಂಬಂಧಿತ ಸುದ್ದಿ