ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ 22 ಸದಸ್ಯರ ಪೈಕಿ 12 ಸದಸ್ಯರು ಬಹುಮತ ಕಳೆದುಕೊಂಡಿರುವ ಪಂಚಾಯತ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡಿಸಿದ್ದು ಅಧ್ಯಕ್ಷೆ ಪೂರ್ಣಿಮಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ
ಹಳೆಯಂಗಡಿ ಪಂಚಾಯತ್ ಅಧ್ಯಕ್ಷರಾಗಿ ಪೂರ್ಣಿಮ ಅಧಿಕಾರವಹಿಸಿಕೊಂಡ 18 ತಿಂಗಳು ಕಳೆದರೂ ಪಂಚಾಯತ್ ವ್ಯಾಪ್ತಿಯ ಹಳೆಯಂಗಡಿ, ಪಾವಂಜೆ, ಸಸಿಹಿತ್ಲು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ವಿಫಲರಾಗಿದ್ದಾರೆ.
ಈ ಗ್ರಾಮಗಳಲ್ಲಿ ಕುಡಿಯುವ ನೀರು, ದಾರಿದೀಪ, ಸ್ವಚ್ಛತೆ ಸಮಸ್ಯೆಗಳು ಉಲ್ಬಣಿಸಿದ್ದು ಗ್ರಾಮಸ್ಥರ ಪರವಾಗಿ ಸದಸ್ಯರು ಪ್ರತಿಭಟನೆ ಮಾಡುವ ಹಂತಕ್ಕೆ ತಲುಪಿದೆ.
ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪೂರ್ಣಿಮ ರವರು ಅಧಿಕಾರವಹಿಸಿಕೊಂಡ ಕಳೆದ ಒಂದುವರೆ ವರ್ಷದಿಂದ ಪಂಚಾಯತ್ ಸದಸ್ಯರ ಸಲಹೆಗಳಿಗೆ ಬೆಲೆ ಇಲ್ಲದಂತಾಗಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಸದಸ್ಯರೊಂದಿಗೆ ಚರ್ಚಿಸದೇ ಯಾವುದೋ ಕಾಲದ ನಿರ್ಣಯಗಳನ್ನು ಅನುಷ್ಠಾನ ಮಾಡುತ್ತಿರುವುದು ಖಂಡನೀಯ, ಆದ್ದರಿಂದ ಪಂಚಾಯತ್ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ1993ರ ಪ್ರಕಾರ ಅಧ್ಯಕ್ಷರು ಈಗಾಗಲೇ ಅಧಿಕಾರ ಕಳೆದುಕೊಂಡಿದ್ದಾರೆ.
ಕೂಡಲೇ ಬಹುಮತ ಕಳೆದುಕೊಂಡ ಅಧ್ಯಕ್ಷರು ಇನ್ನು ಮುಂದಕ್ಕೆ ಈ ಹಿಂದೆ ಮಾಡಿದ್ದ ನಿರ್ಣಯಗಳನ್ನು ಅನುಷ್ಠಾನ ಮಾಡುವ ಮೊದಲು ಪಂಚಾಯತ್ ಸಭೆಯಲ್ಲಿ ಚರ್ಚಿಸಿ ಬಹುಮತ ಅನುಮೋದನೆ ಪಡೆಯತಕ್ಕದ್ದು, ಬಹುಮತ ಕಳೆದುಕೊಂಡ ಅಧ್ಯಕ್ಷರು ಇಂತಹ ಅಧಿಕಾರವನ್ನು ಕಳೆದುಕೊಂಡಿರುತ್ತಾರೆ. ಕೂಡಲೇ ಅಧ್ಯಕ್ಷರು ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಅಧ್ಯಕ್ಷರು ಯಾವುದೇ ನಿರ್ಣಯಗಳನ್ನು ನಮ್ಮ ಸಹಮತವಿಲ್ಲದೆ ನಿರ್ಣಯಗಳನ್ನು ಕೈಗೊಂಡರೆ ಮುಂದೆ ಕಾನೂನು ಹೋರಾಟಕ್ಕೆ ಸಿದ್ಧರಾಗಬೇಕು ಎಂದು ವಿಪಕ್ಷದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
Kshetra Samachara
17/06/2022 10:39 pm