ಕಾರ್ಕಳ: ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸುವಂತಹ ಕೆಲಸವನ್ನು ಕಾಂಗ್ರೆಸ್ ಯಾವತ್ತೂ ಮಾಡಿಲ್ಲ.ಅವರಲ್ಲಿ ಸದ್ಭಾವನೆ ಬೆಳೆಸುವ ಕೆಲಸ ಇವತ್ತು ನಡೆಯಬೇಕಾಗಿದೆ. ಆದರೆ ಇವತ್ತು ಪಠ್ಯ ಪುಸ್ತಕ ವಿಚಾರದಲ್ಲಿ ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಕಾರ್ಕಳದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯ ಸಿದ್ಧಾಂತವಿರುವ ಉಡುಪಿಯ ಕಾರ್ಕಳದಲ್ಲಿ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಸಿರುವುದು ವಿಷಾದನೀಯ. ಗೋಡ್ಸೆಯಂತಹ ಮನಸ್ಥಿತಿಯುಳ್ಳ ವ್ಯಕ್ತಿಗಳಿಂದ ಇಂತಹ ಕೃತ್ಯ ನಡೆದಿದೆ. ಇದರ ಮೂಲೋತ್ಪಾಟನೆ ಮಾಡಬೇಕಿದೆ. ಇದೊಂದು ಸೀರಿಯಸ್ ಅಫೆನ್ಸ್ ಎಂದು ಹೇಳಿದ್ದಾರೆ.
ಗೋಡ್ಸೆ ನಾಮಫಲಕ ವಿಚಾರವಾಗಿ ಪೊಲೀಸರು ಐಪಿಸಿ ಸೆಕ್ಷನ್ 290ರಡಿ (ಕ್ಲುಲ್ಲಕ ಪ್ರಕರಣ) ಕೇಸ್ ದಾಖಲಿಸಿದ್ದಾರೆ. ಇಂತಹ ಗಂಭೀರ ಪ್ರಕರಣವನ್ನು 'ಸೆಕ್ಷನ್ 153 ಎ' ಅಡಿ ದಾಖಲಿಸಬೇಕಿತ್ತು. ಪೊಲೀಸ್‌ನವರು ಸರಿಯಾದ ರೀತಿಯಲ್ಲಿ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ. ಹೀಗಾಗಿ ಪೊಲೀಸ್ ಅಧಿಕಾರಿಗಳಿಗೆ ಇನ್ನೊಮ್ಮೆ ತರಬೇತಿ ನೀಡುವ ಅವಶ್ಯಕತೆ ಇದೆ. ಅಧಿಕಾರಿಗಳ ನಿಷ್ಠೆ ವೃತ್ತಿಗಿರಬೇಕೆ ಹೊರತು ಪಕ್ಷಕ್ಕೆ ಅಲ್ಲ ಎಂದು ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
13/06/2022 01:02 pm