ಉಡುಪಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷ ತೊರೆದದ್ದೇ ಒಳ್ಳೆಯದಾಯಿತು. ಅವರು ಮುಂದೊಮ್ಮೆ ಅದಕ್ಕೆ ಪಶ್ಚಾತಾಪ ಪಡಲಿದ್ದಾರೆ ಮತ್ತು ಬಿಜೆಪಿಗೆ ಆಘಾತ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಯು.ಆರ್ .ಸಭಾಪತಿ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಪ್ರಮೋದ್ ಕಾಂಗ್ರೆಸ್ ನಲ್ಲಿದ್ದಾಗಲೇ ಕೇಸರಿ ಟೋಪಿ ಹಾಕಿ ತಿರುಗಾಡುತ್ತಿದ್ದರು. ನಾವು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ವಿಷಯ ತಿಳಿಸಿದ್ದೆವು. ಆದರೆ ಡಿ.ಕೆ ಶಿವಕುಮಾರ್ ಪ್ರಮೋದ್ ಮಧ್ವರಾಜ್ ಅವರನ್ನು ಓಲೈಸಲು ಪಕ್ಷದ ಉಪಾಧ್ಯಕ್ಷ ಸ್ಥಾನ ಕೊಟ್ಟರು.
ಉಪಾಧ್ಯಕ್ಷ ಸ್ಥಾನ ನೀಡಿದ ಮರುದಿನವೇ ಅವರು ಬಿಜೆಪಿಗೆ ಸೇರಿದ್ದಾರೆ. ಈ ಹಿಂದೆ ಅವರ ತಾಯಿ ಮನೋರಮಾ ಮಧ್ವರಾಜ್ ಕೂಡ ಬಿಜೆಪಿಗೆ ದ್ರೋಹ ಮಾಡಿದ್ದರು. ಮುಂದೆ ಪ್ರಮೋದ್ ಮಧ್ವರಾಜ್ ಕೂಡ ಅದನ್ನೇ ಮಾಡಲಿದ್ದಾರೆ ಎಂದು ಯು.ಆರ್ ಸಭಾಪತಿ ಭವಿಷ್ಯ ನುಡಿದಿದ್ದಾರೆ.
PublicNext
21/05/2022 03:27 pm