ಉಡುಪಿ: ರಮ್ಯಾ ಡಿಕೆಶಿ ಟ್ವೀಟ್ ವಾರ್ ವಿಚಾರವಾಗಿ ಉಡುಪಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹ್ಯಾರಿಸ್ ರಮ್ಯಾ ಮೇಲೆ ಗರಂ ಅಗಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಧ್ಯಮದ ಜೊತೆ ಮಾತನಾಡಿದ ಅವರು, ರಮ್ಯ ಇಷ್ಟು ದಿನ ಎಲ್ಲಿದ್ದರು ಅಂತ ನನಗೂ ಗೊತ್ತಿಲ್ಲ. ಇಷ್ಟು ತಿಂಗಳು ಇಷ್ಟು ವರ್ಷ ರಮ್ಯ ಎಲ್ಲಿದ್ದರು? ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಬಂದರು? ಎಂದು ಗರಂ ಆಗಿದ್ದಾರೆ. ರಮ್ಯ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ?ಡಿಕೆ ಶಿವಕುಮಾರ್ ಅವರು ಬಹಳ ಕ್ಲಿಯರಾಗಿ ಇವತ್ತು ಸ್ಪಷ್ಟಪಡಿಸಿದ್ದಾರೆ. ಎಂಬಿ ಪಾಟೀಲ್ ಅಶ್ವತ್ಥ ನಾರಾಯಣ್ ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಹೌದಪ್ಪ.. ಬಂದಿರಬಹುದು ರಕ್ಷಣೆಗೋಸ್ಕರ ಎಂದು ಹೇಳಿದ್ದಾರೆ. ಎಂ.ಬಿ ಪಾಟೀಲ್ ಹೋಗಿದ್ದಾರೆ ಎಂದು ಎಲ್ಲೂ ಡಿಕೆ ಶಿವಕುಮಾರ್ ಹೇಳಿಲ್ಲ ಎಂದು ಡಿಕೆಶಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ನ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ ಎಂದ ಅವರು, ಡಿಕೆಶಿ ಎಂಬಿ ಪಾಟೀಲ್ ಸಿದ್ದರಾಮಯ್ಯ ನಾವೆಲ್ಲ ಜೊತೆಗಿದ್ದೇವೆ.ಸುಮ್ಮನೆ ಡಿಸ್ಟರ್ಬೆನ್ಸ್ ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಮ್ಯಾಗೆ ಸಮ್‌ಥಿಂಗ್ ಅಟೆನ್ಶನ್ ಸೀಕಿಂಗ್ ಇದೆ. ನಾನು ಇನ್ನೂ ಇದ್ದೀನಿ ಎಂದು ತೋರಿಸಿಕೊಳ್ಳುತ್ತಿರಬಹುದು. ಈ ವಿಚಾರಕ್ಕೂ ರಮ್ಯಾಗೂ ಏನು ಸಂಬಂಧ? ರಮ್ಯಾ ಅವರ ಹಳೆಯ ಟ್ವೀಟ್‌ಗಳನ್ನು ತೆಗೆದುಕೊಂಡು ನೋಡಿ. ಯಾವುದೋ ಸಿನಿಮಾಗಳ ಬಗ್ಗೆ ಮಾತ್ರ ಟ್ವೀಟ್ ಮಾಡಿಕೊಂಡಿದ್ದರು. ಇತ್ತೀಚಿಗೆ ಅವರು ಯಾವುದೇ ರಾಜಕೀಯ ಟ್ವೀಟ್ ಗಳನ್ನು ಮಾಡಿಲ್ಲ. ನಟಿ ರಮ್ಯಾ ಇಂತಹ ಚೀಪ್ ಪಾಲಿಟಿಕ್ಸ್ ಮಾಡಬಾರದು ಎಂದು ನಲಪಾಡ್ ಹರಿಹಾಯ್ದಿದ್ದಾರೆ.
PublicNext
12/05/2022 10:50 pm