ಮಂಗಳೂರು: ಬಿಜೆಪಿ ಸರಕಾರ ಮತೀಯ ವಾದದಿಂದ ಪ್ರಯೋಜನ ಪಡೆಯುವ ಕನಸು ಕಾಣುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮತೀಯ ಗಲಭೆಗಳಾದಲ್ಲಿ ಅದನ್ನು ಕಾಂಗ್ರೆಸ್ ಗಲಾಟೆ ಮಾಡಿಸಿದ್ದು ಎಂದು ಹೇಳುತ್ತಾರೆ. ಆದರೆ ಮತೀಯ ಗಲಭೆಯಲ್ಲಿ ಹತ್ಯೆಯಾದವರಲ್ಲಿ ಓರ್ವನೇ ಓರ್ವ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಇಲ್ಲ ಎಂದು ಹೇಳಿದರು.
ಆದರೆ ಬಿಜೆಪಿಗರು ಹತ್ಯೆ ಮಾಡಿದವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡುತ್ತಾರೆ. ಹತ್ಯೆಯ ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರ ಹೆಸರುಗಳಿವೆ. ಕೆಲವರು ರಾಜ್ಯದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಅವರುಗಳು ಗಲಭೆಗಳು ಮಾಡುವ ಉದ್ದೇಶದಿಂದಲೇ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಆದರೆ ಕಾಂಗ್ರೆಸ್ ನಾಯಕರು ಯಾರಾದರೂ ಪ್ರಚೋದನಕಾರಿ ಭಾಷಣ ಮಾಡಿದ ಒಂದು ತುಣುಕು ಇದ್ದರೆ ತೋರಿಸಿ. ಆದ್ದರಿಂದ ರಾಜ್ಯದಲ್ಲಿ ಸಾಮರಸ್ಯವನ್ನು ಕದಡುವವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಸಚಿವ ಬಿ ರಮಾಟನಾಥ್ ರೈ ಹೇಳಿದರು.
Kshetra Samachara
02/05/2022 05:06 pm