ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಸುರತ್ಕಲ್ ಎನ್ಐಟಿಕೆ ಅಕ್ರಮ ಟೋಲ್ ವಿರುದ್ಧ ಅವಿಭಾಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಹಾಗೂ ವಿವಿಧ ಸಂಘಟನೆಗಳ ಆಟೋ ಹಾಗೂ ಟೂರಿಸ್ಟ್ ಮಾಲಕ ಚಾಲಕರ ಸಹಯೋಗದೊಂದಿಗೆ ಪಾದಯಾತ್ರೆಗೆ ಹೆಜಮಾಡಿಯ ಟೋಲ್ ಬಳಿ ಚಾಲನೆ ನೀಡಲಾಯಿತು.
ಪಾದಯಾತ್ರೆಗೆ ಚಾಲನೆ ನೀಡಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸುರತ್ಕಲ್ ಎನ್ಐಟಿಕೆ ಅಕ್ರಮ ಟೋಲ್ ವಿರುದ್ಧ ಸಂಬಂಧಪಟ್ಟ ಆಡಳಿತ ಮೌನವಾಗಿದೆ. ಟೋಲ್ ವಿರುದ್ಧ ಪ್ರತಿಭಟನೆ ನಡೆಸುವವರನ್ನು ದಮನಿಸುವ ಯತ್ನ ನಡೆಸಲಾಗುತ್ತಿದೆ. ಅಕ್ರಮ ಟೋಲ್ ರದ್ದುಪಡಿಸುವ ವರೆಗೂ ಪ್ರತಿಭಟನೆಗೆ ನಡೆಸಿ ಜೈಲಿಗೆ ಹೋಗಲು ಸಿದ್ಧ ಎಂದು ಘೋಷಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವ, ಟೋಲ್ ವಿರೋಧಿ ಸಮಿತಿಯ ಹರೀಶ್ ಪುತ್ರನ್, ದಿನೇಶ್ ಹೆಗ್ಡೆ ಉಳೆಪಾಡಿ, ಮಧು ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ವಿವಿಧ ಘೋಷಣೆಗಳೊಂದಿಗೆ ಹೆಜಮಾಡಿ ಟೋಲ್ ಬಳಿಯಿಂದ ಸುರತ್ಕಲ್ ಎನ್ಐಟಿಕೆ ಟೋಲ್ ವರೆಗೆ ಬೃಹತ್ ಪಾದಯಾತ್ರೆ ನಡೆಯಿತು.
Kshetra Samachara
22/03/2022 01:46 pm