ಮುಲ್ಕಿ: ಹಿಜಾಬ್ ವಿರುದ್ಧ ಹೈಕೋರ್ಟ್ ತೀರ್ಪು ಬಂದ ಹಿನ್ನೆಲೆಯಲ್ಲಿ ಗುರುವಾರ ಮುಸ್ಲಿಂ ಸಂಘಟನೆಗಳು ಕರೆ ಕೊಟ್ಟಿದ್ದ ಬಂದ್ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಯಶಸ್ವಿಯಾಗಿದೆ.
ಮುಲ್ಕಿ, ಕಾರ್ನಾಡು, ಕಿನ್ನಿಗೋಳಿ, ಹಳೆಯಂಗಡಿ ಪಕ್ಷಿಕೆರೆ ಪರಿಸರದ ಮುಸ್ಲಿಂ ವ್ಯಾಪಾರಸ್ಥರು ತಮ್ಮ ವ್ಯಾಪಾರ ಮಳಿಗೆಗಳನ್ನು ಮುಚ್ಚಿದ್ದರು. ಕಾರ್ನಾಡು ಪೇಟೆಯಲ್ಲಿ ಮುಂಜಾನೆ ಕೆಲ ಮುಸ್ಲಿಂ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದು, ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿದ ಮುಖಂಡರು ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ. ಯಾವಾಗಲೂ ಜನಜಂಗುಳಿಯಿಂದ ಇರುತ್ತಿದ್ದ ಕಾರ್ನಾಡು ಪೇಟೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಕಿನ್ನಿಗೋಳಿಯಲ್ಲಿನ ಹೂವಿನ ಅಂಗಡಿ, ಚಪ್ಪಲ್, ಹೋಟೆಲ್ ಮತ್ತಿತರ ಅಂಗಡಿಗಳು ಮುಚ್ಚಿದ್ದವು. ಕಿನ್ನಿಗೋಳಿಯಲ್ಲಿ ಪ್ರತಿ ಗುರುವಾರ ವಾರದ ಸಂತೆಯಾಗುತ್ತಿದ್ದು, ಕೇವಲ ಬೆರಳೆಣಿಕೆಯ ಹಿಂದೂ ಮತ್ತು ಕ್ರೈಸ್ತ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದುದು ಕಾಣುತ್ತಿತ್ತು.
Kshetra Samachara
17/03/2022 06:21 pm