ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿದ್ಯಾರ್ಥಿಗಳ ರಕ್ಷಣೆಗೆ ರಾಜಕೀಯ ಬಣ್ಣ ಬೇಡ - ಡಾ.ಸಿ.ಎನ್.ಅಶ್ವತ್ಥ ನಾರಾಯಣ್

ಮಂಗಳೂರು: ಉಕ್ರೇನ್ ನಿಂದ ನಾಗರಿಕರನ್ನು ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಏರ್ ಲಿಫ್ಟ್ ಮಾಡಿರುವ ಪ್ರಥಮ ದೇಶ ಭಾರತ. ನಮ್ಮ ದೇಶದ ರೀತಿ ಇಂತಹ ಕಾರ್ಯಾಚರಣೆ ಬೇರೆ ಯಾವ ದೇಶವೂ ಮಾಡಿಲ್ಲ. ಇದನ್ನು‌ ಗಮನಿಸದೆ ರಾಜಕೀಯ ಮಾಡಬೇಕು ಎನ್ನುವ ರೀತಿಯಲ್ಲಿ ಮಾತನಾಡಲಾಗುತ್ತಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಮಾಹಿತಿ ಕೊರತೆಯಿದೆ‌.‌ ಏರ್ ಲಿಫ್ಟ್ ಮಾಡುವಲ್ಲಿ ಸರ್ಕಾರ ವಿಫಲ ಎಂಬ ಸಿದ್ದರಾಮಯ್ಯ ಹೇಳಿಕೆ ಹುರುಳಿಲ್ಲದ್ದು.ಪ್ರಧಾನಿಯವರು ನಾಲ್ಕು ಸಚಿವರನ್ನು ಆ ದೇಶಕ್ಕೆ ಕಳುಹಿಸಿ ಸವಾಲಿನ ರೀತಿ ಕೆಲಸ ಮಾಡುತ್ತಿದ್ದಾರೆ. ಇವತ್ತು ಬೇರೆ ವಿಷಯದ ಚರ್ಚೆ ಮಾಡಲು ಸಮಯವಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆಗೆ ನಮ್ಮ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಯಾವುದೇ ಕೊರತೆಯಿಲ್ಲ. ಕರ್ನಾಟಕದಲ್ಲಿ ಎಷ್ಟೊಂದು ವೈದ್ಯಕೀಯ ಕಾಲೇಜು ಇದೆ. ಎಷ್ಟು ಉಚಿತ ಸೀಟ್ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಪ್ರತಿಯೊಬ್ಬರನ್ನು ವೈದ್ಯರನ್ನಾಗಿ ಮಾಡಲು ಸಾಧ್ಯವಿಲ್ಲ. ಡಿಮ್ಯಾಂಡ್ ಗಿಂತ ಸಪ್ಲೈ ಜಾಸ್ತಿಯಿದೆ. ಭಾರತದಲ್ಲಿ ಕೊರತೆಯಿರಬಹುದು ಆದರೆ ಕರ್ನಾಟಕದಲ್ಲಿ ಸಾಕಷ್ಟು ವೈದ್ಯರು ಇದ್ದಾರೆ. ಉಳಿದಂತೆ ಇಂತಹ ಭಾವನಾತ್ಮಕ ಸಂದರ್ಭದಲ್ಲಿ ಈ ರೀತಿ ಚರ್ಚೆ ಮಾಡೋದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಹೇಳಿದರು.

Edited By : Shivu K
PublicNext

PublicNext

03/03/2022 07:09 pm

Cinque Terre

39.18 K

Cinque Terre

0

ಸಂಬಂಧಿತ ಸುದ್ದಿ