ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಲೇಡಿ ಗೋಷನ್'ಗೆ ರಾಣಿ ಅಬ್ಬಕ್ಕ ಮರುನಾಮಕರಣಕ್ಕೆ ಸರಕಾರಕ್ಕೆ ಪ್ರಸ್ತಾವ; ಸಚಿವ ಸುನಿಲ್

ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಗೆ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ 'ಉಳ್ಳಾಲ ರಾಣಿ ಅಬ್ಬಕ್ಕ ' ಎಂದು ಮರುನಾಮಕರಣ ಮಾಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಸಚಿವರು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರನ್ನು ನಾಡಿಗೆ ಪರಿಚಯಿಸುವ ಅಗತ್ಯವಿದೆ. ಆದ್ದರಿಂದ ಸರಕಾರದ ಮುಂದೆ ಈ ಪ್ರಸ್ತಾವನೆ ಇಡಲಾಗಿದೆ. ಅಬ್ಬಕ್ಕನ ಹೆಸರಿಡಲು ಯಾರಾದರೂ ವಿರೋಧ ಮಾಡುತ್ತಾರೆಯೇ ಮಾಡಲಿ ಎಂದರು.

ದ.ಕ.ಜಿಲ್ಲೆಯಲ್ಲಿ ವಿದ್ಯುತ್ ಬಳಕೆ, ಸರಬರಾಜು ಹೆಚ್ಚಾಗಿದೆ. ಆದ್ದರಿಂದ 400 ಕೆವಿ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಇದಕ್ಕೆ ಮಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ನಡೆದ ಕಡತ ವಿಲೇವಾರಿ ಅಭಿಯಾನದಲ್ಲಿ ಒಂದೇ ವಾರದಲ್ಲಿ 68,952 ಅರ್ಜಿಗಳ ವಿಲೇವಾರಿ ಮಾಡಲಾಗಿದೆ.

ವಿಲೇವಾರಿಯಾಗದೆ ಉಳಿದ 85,384 ಅರ್ಜಿಗಳಲ್ಲಿ ಶೇ.80ರಷ್ಟು ಅರ್ಜಿಗಳೊಂದಿಗೆ ಹೊಸ 1700 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸೋಮವಾರದೊಳಗೆ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ‌. ಮತ್ತೆ ಈ ರೀತಿಯ ಅಭಿಯಾನ ನಡೆಯುವ ದಿನಗಳು ಬಾರದಂತೆ ಅಧಿಕಾರಿಗಳು ತಕ್ಷಣ ಅರ್ಜಿ ವಿಲೇವಾರಿ ಮಾಡಬೇಕೆಂದು ಸಚಿವ ಸುನಿಲ್ ಕುಮಾರ್ ಸೂಚನೆ ನೀಡಿದರು.

Edited By :
Kshetra Samachara

Kshetra Samachara

26/02/2022 10:56 pm

Cinque Terre

12.22 K

Cinque Terre

3

ಸಂಬಂಧಿತ ಸುದ್ದಿ