ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕವಿ ಮುದ್ದಣರ 150ನೇ ಜನ್ಮ ವರ್ಷಾಚರಣೆ: ನಳಿನ್ ಕುಮಾರ್ ರಿಂದ 150 ರೂ. ನಾಣ್ಯ ಬಿಡುಗಡೆ

ಮಂಗಳೂರು: ಕವಿ ಮುದ್ದಣರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ 150 ರೂ. ಹೊಸ ನಾಣ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಇಂದು ಮಂಗಳೂರಿನಲ್ಲಿ ಬಿಡುಗಡೆ ಮಾಡಿದರು.

ನಾಣ್ಯ ಅನಾವರಣ ಮಾಡಿ ಬಳಿಕ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿನ ಆಗಿನ ಕವಿಗಳಲ್ಲಿ ಮುದ್ದಣರು ಬಹಳ ಶ್ರೇಷ್ಠ ಪರಂಪರೆಯನ್ನು ಹುಟ್ಟುಹಾಕಿದವರು. ಇದೀಗ ಅವರ 150 ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಸಾಹಿತ್ಯ ಪ್ರಚಾರ, ಪ್ರಸಾರದ ಜೊತೆಗೆ ದೇಶದ ಗೌರವ ಸಲ್ಲಬೇಕೆಂಬ ದೃಷ್ಟಿಯಲ್ಲಿ ಪ್ರಧಾನಿ ಮೋದಿಯವರು ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುದ್ದಣರ ಹೆಸರಿನಲ್ಲಿ 150 ರೂ‌. ಮೌಲ್ಯದ ಬೆಳ್ಳಿಯ ನಾಣ್ಯ ಬಿಡುಗಡೆ ಮಾಡಿದ್ದಾರೆ. ಹತ್ತಾರು ಕವಿಗಳು, ಕನ್ನಡದ ಹೋರಾಟಗಾರರು ಹುಟ್ಟಿ ಬೆಳೆದಿರುವ ಜಿಲ್ಲೆಯಾದ ದ.ಕ.ಜಿಲ್ಲೆಯಲ್ಲಿ ಇಷ್ಟು ಶ್ರೇಷ್ಠವಾದ ಗೌರವಕ್ಕೆ ಪಾತ್ರರಾದವರು ಕವಿ ಮುದ್ದಣ ಮಾತ್ರ. ಇಂತಹ ಶ್ರೇಷ್ಠ ಕವಿಯನ್ನು ಗುರುತಿಸುವ ಕಾರ್ಯವನ್ನು ನರೇಂದ್ರ ಮೋದಿ ಸರಕಾರ ಮಾಡಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

24/01/2022 01:00 pm

Cinque Terre

6.15 K

Cinque Terre

0

ಸಂಬಂಧಿತ ಸುದ್ದಿ