ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಒಂದೋ ಸೇವೆ ಖಾಯಂಗೊಳಿಸಿ, ಇಲ್ಲದಿದ್ದರೆ ದಯಾಮರಣ ಕರುಣಿಸಿ"!; ಅತಿಥಿ ಉಪನ್ಯಾಸಕರ ಅಳಲು

ವರದಿ: ರಹೀಂ ಉಜಿರೆ

ಉಡುಪಿ: ಸರಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೇಡಿಕೆ ಈಡೇರಿಕೆಗಾಗಿ ಮತ್ತೊಮ್ಮೆ ಪ್ರತಿಭಟನೆಗೆ ಇಳಿದಿದ್ದಾರೆ. ಉಡುಪಿಯ ಹುತಾತ್ಮ ಸೈನಿಕರ ಸ್ಮಾರಕದ ಎದುರು ಸಿಎಂ ಮತ್ತು ಸಚಿವರ ಮುಖವಾಡ ಧರಿಸಿ ಪ್ರತಿಭಟಿಸಿದ್ದು ಗಮನ ಸೆಳೆಯಿತು. ಜೊತೆಗೆ ಪ್ರತಿಭಟನೆ ಸ್ಥಳದಲ್ಲೇ ಬೂಟ್ ಪಾಲಿಷ್, ಚಹಾ ಮಾರಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಮಸ್ಯೆ ದಿನೇ ದಿನೆ ಬಿಗಡಾಯಿಸುತ್ತಲೇ ಇದೆ. ಸರ್ಕಾರ ಪ್ರತಿ ಬಾರಿ ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತದೆ. ಇದರಿಂದ ಆಕ್ರೋಶಿತ ನೂರಾರು ಅತಿಥಿ ಉಪನ್ಯಾಸಕರು ಇಂದು ಪ್ರತಿಭಟನೆ ನಡೆಸಿ, ಸೇವೆ ಖಾಯಮಾತಿಗೆ ಆಗ್ರಹಿಸಿದರು.

ಜಿಲ್ಲೆಯಲ್ಲಿ ನೂರಾರು ವಿದ್ಯಾವಂತರು ಅರೆಕಾಲಿಕ ಉಪನ್ಯಾಸಕರಾಗಿ ಅಥವಾ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಸೇವೆ ಖಾಯಂಗೊಳಿಸಿ ಸೇವಾ ಭದ್ರತೆ ಒದಗಿಸಬೇಕು. ಮತ್ತು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿಗಳ ಸೇವೆಯನ್ನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಬೇಕು ಅಥವಾ ಸೇವಾ ಸಕ್ರಮಾತಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಅತಿಥಿ ಉಪನ್ಯಾಸಕರು ಸರ್ಕಾರದ ಮುಂದಿಟ್ಟಿದ್ದಾರೆ.

ಕೆಲವು ಅತಿಥಿ ಉಪನ್ಯಾಸಕರಂತೂ "ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಥವಾ ನಮಗೆ ಸರಕಾರವೇ ದಯಾಮರಣ ಕರುಣಿಸಲಿ" ಎಂದು ಅಳಲು ತೋಡಿಕೊಂಡರು! ಜಿಲ್ಲಾ ನಾಗರಿಕ ಸಮಿತಿ ಅತಿಥಿ ಉಪನ್ಯಾಸಕರಿಗೆ ಬೆಂಬಲವಾಗಿ ನಿಂತಿದ್ದು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದೆ.

Edited By : Manjunath H D
Kshetra Samachara

Kshetra Samachara

06/01/2022 08:19 pm

Cinque Terre

7.36 K

Cinque Terre

2

ಸಂಬಂಧಿತ ಸುದ್ದಿ