ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟೇಶ್ವರ ಗ್ರಾಮಪಂಚಾಯತ್ ಬಿಜೆಪಿ‌‌ ಮತದಾರರನ್ನು ಭೇಟಿಯಾದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ರಾಜ್ಯ ವಿಧಾನ ಪರಿಷತ್ ಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆಯು ಡಿ. 10 ಶುಕ್ರವಾರ ಬೆಳಿಗ್ಗೆನಿಂದ ನಡೆಯುತ್ತಿದೆ.

ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದ.ಕ ಹಾಗೂ ಉಡುಪಿ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು ಚುನಾವಣೆ ದಿನವಾದ ಇಂದು ಜಿಲ್ಲೆಯ ವಿವಿದಡಡೆ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.

ಕೋಟೇಶ್ವರ ಗ್ರಾಮಪಂಚಾಯತ್' ಒಟ್ಟು 26 ಸದಸ್ಯರ ಬಲವನ್ನು ಹೊಂದಿದೆ.‌ಮತದಾನ ಪೂರ್ವ ಬಿಜೆಪಿ ಮುಖಂಡ ಹಾಗೂ ಗ್ರಾ.ಪಂ‌ ಸದಸ್ಯ ರಾಜೇಶ್ ಉಡುಪ ಅವರ ಕೋಟೇಶ್ವರದ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ ಆಗಮಿಸಿದ ಅವರು ಬಿಜೆಪಿ‌ ಬೆಂಬಲಿತ 22 ಮತದಾರರನ್ನು ಭೇಟಿ ಮಾಡಿದರು.

ಈ ಸಂದರ್ಭ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸತೀಶ್ ಪೂಜಾರಿ ವಕ್ವಾಡಿ, ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ ಮೊದಲಾದವರಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕಾರ್ಯಕರ್ತರು, ಪಕ್ಷವನ್ನು ಬೆಂಬಲಿಸುವ ಪಕ್ಷೇತರರು, ಇತರ ಪಕ್ಷದ ಸದಸ್ಯರ ಕೂಡ ಬೆಂಬಲಿಸುವ ನಿರೀಕ್ಷೆಯಿದ್ದು ಬಹುಮತದೊಂದಿಗೆ ಆಯ್ಕೆಯಾಗುವ ವಿಶ್ವಾಸವಿದೆ. ಬಿಜೆಪಿಗೆ 3500 ಕ್ಕೂ ಅಧಿಕ ಮತವಿದ್ದು ಎಲ್ಲಾ ಮತ ನಮಗೆ ಸಿಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಪಂಚಾಯತ್ ದಿನಾಚರಣೆಯನ್ನು ಆಚರಿಸುವ ಚಿಂತನೆಯಿದ್ದರೂ ಕೂಡ ಕೋವಿಡ್ ಕಾರಣಕ್ಕಾಗಿ ಎರಡು ವರ್ಷದಿಂದ ಆಗಿರಲಿಲ್ಲ. ಆದರೆ ಪಂಚಾಯತ್ ಸಬಲೀಕರಣಕ್ಕಾಗಿ ಗ್ರಾ.ಪಂ ಸದಸ್ಯರ ಗೌರವ, ಗೌರವ ಧನವನ್ನು ಹೆಚ್ಚಿಸಲು, ಗ್ರಾಮಪಂಚಾಯತ್ ಗೆ ಸಂಬಂಧಿಸಿದ ಆಡಳಿತಾತ್ಮಕ‌ ನಿರ್ಧಾರಗಳನ್ನು‌ ಕೈಗೊಳ್ಳಲು ಬೇಕಾದ ಕ್ರಮಕೈಗೊಳ್ಳಲಾಗುತ್ತದೆ. ಜನನ ಮರಣ ದೃಢೀಕರಣ ಪತ್ರ, ಸಂಧ್ಯಾಸುರಕ್ಷಾ, ಮನಸ್ವಿನಿ, ಅಂಗವಿಕಲ, ವೃದ್ಧಾಫ್ಯ ವೇತನ ಮೊದಲಾದವುಗಳನ್ನು ಗ್ರಾಮಪಂಚಾಯತಿಯಲ್ಲೇ ಮಾಡಲು ಬವ್ಯವಸ್ಥೆ ಅನುಷ್ಟಾನಗೊಳಸಲು ಸಾಧಕ ಬಾಧಕ ಪರಾಮರ್ಷಿಸಿ ಸರಕಾರದ ಗಮನಕ್ಕೆ ತರುವ ಅನಿವಾರ್ಯತೆಯಿದೆ.ಸಿಬ್ಬಂದಿಗಳ ದರ್ಜೆಗಳ ಬಗ್ಗೆಯೂ ಜಿಕ್ಞಾಸೆಯಿದ್ದು ಮುಂದಿನ ದಿನಗಳಲ್ಲಿ ಗ್ರಾ.ಪಂ ಸರಕಾರದಂತೆ ಕಾರ್ಯ ನಿರ್ವಹಿಸುವಂತೆ ಮಾಡುವ ಇರಾದೆಯಿದೆ ಎಂದರು.

ಜನಪ್ರತಿನಿಧಿಗಳು ರಾಜಕೀಯ ಜಂಜಾಟ ಬಿಟ್ಟು ಕ್ರೀಡಾಸಕ್ತಿ ಹೊಂದುವ ಉದ್ದೇಶದಿಂದ ಕೋಟದಲ್ಲಿ ಹೊಳಪು ಕಾರ್ಯಕ್ರಮವನ್ನು ಕೋಟತಟ್ಟು ಗ್ರಾ.ಪಂ ಹಾಗೂ ಶಿವರಾಮ ಕಾರಂತ ಟ್ರಸ್ಟ್ ಆಯೋಜಿಸುತ್ತಿದ್ದು ಒಂದು ಕುಟುಂಬದಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯ ಹಾಗೂ ರಾಷ್ಟ್ರವ್ಯಾಪಿ ಈ ಕಾರ್ಯಕ್ರಮ ಮಾಡುವ ಬಗ್ಗೆ ಸಂಬಂದಪಟ್ಟವರು ಗಮನಹರಿಸುತ್ತಾರೆ ಎಂದರು.

Edited By : PublicNext Desk
Kshetra Samachara

Kshetra Samachara

10/12/2021 03:10 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ