ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ʼಸಮರ ಸೇನಾನಿʼ ಜ.ಬಿಪಿನ್‌ ರಾವತ್‌ ಅಮರ; ಕಾಂಗ್ರೆಸ್ ಶ್ರದ್ಧಾಂಜಲಿ

ಮುಲ್ಕಿ: ಸೇನಾ ಹೆಲಿಕಾಪ್ಟರ್‌ ಅಪಘಾತದಿಂದ ದುರಂತ ಸಾವಿಗೀಡಾದ ದೇಶದ ಮೂರು ಸೇನಾಪಡೆಗಳ ಮೊದಲ ಮುಖ್ಯಸ್ಥರೆಂಬ ಹೆಗ್ಗಳಿಕೆಯ ಮಹಾಧೀರ ಸಮರ ಸೇನಾನಿ ದಿವಂಗತ ಜನರಲ್ ಬಿಪಿನ್ ರಾವತ್ ಮತ್ತು ಇತರ ವೀರಯೋಧರ ಆತ್ಮಶಾಂತಿಗಾಗಿ ಶ್ರದ್ಧಾಂಜಲಿ ಸಭೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಳೆಯಂಗಡಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆಯಿತು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಅವರು ಸಿಡಿಎಸ್‌ ಜ. ಬಿಪಿನ್‌ ರಾವತ್‌ ಅವರ ಅಪ್ರತಿಮ ಯುದ್ಧ ಕೌಶಲ, ಧೈರ್ಯ- ಸಾಹಸದ ಬಗ್ಗೆ ಮಾತನಾಡಿದರು.

ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬೆರ್ನಾಡ್, ಮುಲ್ಕಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಟಿ.ಎಚ್. ಮಯ್ಯದಿ, ಮಹಿಳಾ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಅಧ್ಯಕ್ಷ ಅಶೋಕ್ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜುನಾಥ ಕಂಬಾರ ವಂದಿಸಿದರು.

Edited By : Vijay Kumar
Kshetra Samachara

Kshetra Samachara

09/12/2021 09:45 pm

Cinque Terre

3.77 K

Cinque Terre

0

ಸಂಬಂಧಿತ ಸುದ್ದಿ