ಉಡುಪಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿನ್ನೆ ಉಡುಪಿಯಲ್ಲಿ ಆರ್ ಎಸ್ಎಸ್ ನ್ನು ಟೀಕೆ ಮಾಡಿದ್ದಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಮಣಿಪಾಲದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ,
ಈ ದೇಶಕ್ಕೆ ಆರ್ ಎಸ್ ಎಸ್ ಕೊಡುಗೆ ಏನು? ಎಂದು ಧ್ರುವನಾರಾಯಣ್ ಕೇಳುತ್ತಾರೆ. ಅವರು ಅದೇ ಪ್ರಶ್ನೆಯನ್ನು ಕೇಳಬೇಕೇ ಹೊರತು ಬೇರೇನೂ ಕೇಳಲು ಸಾಧ್ಯವಿಲ್ಲ.
ಕಾಂಗ್ರೆಸ್ ನವರು ಪೂಜಿಸುವಂತಹ ನೆಹರು ಅವರೇ ಆರೆಸ್ಸೆಸ್ಸನ್ನು ಹೊಗಳಿದ್ದರು.ಆರ್ ಎಸ್ಎಸ್ ರಾಷ್ಟ್ರಪ್ರೇಮಿ ಸಂಘಟನೆ ಎಂದವರು ಹೇಳಿದ್ದರು.
ಆರ್ ಎಸ್ಎಸ್ ನ ರಾಷ್ಟ್ರಪ್ರೇಮವನ್ನು ಗಮನದಲ್ಲಿಟ್ಟುಕೊಂಡು ನೆಹರು ಪಥಸಂಚಲನದಲ್ಲಿ ಅವಕಾಶ ಕೊಟ್ಟಿದ್ದರು. ಆರ್ ಎಸ್ಎಸ್ ಅನ್ನು ಟೀಕಿಸುವ ಕಾಂಗ್ರೆಸ್ ನವರು ನೆಹರುಗಿಂತ ಮೇಲಿನವರಾ? ಎಂದು ಕೋಟ ಪ್ರಶ್ನಿಸಿದ್ದಾರೆ.
Kshetra Samachara
26/11/2021 09:43 pm