ಸುರತ್ಕಲ್: ಎಂಆರ್ಪಿಎಲ್- ಒಎನ್ ಜಿಸಿ ಕರ್ಮಚಾರಿ ಸಂಘದ ಗುತ್ತಿಗೆ ಕಾರ್ಮಿಕರ ಹೋರಾಟ ನಡೆಯುತ್ತಿರುವ ಸ್ಥಳಕ್ಕೆ ತಮ್ಮ ಬೆಂಗಳೂರಿನ ಪ್ರವಾಸ ರದ್ದುಗೊಳಿಸಿ ಶಾಸಕ ಉಮಾನಾಥ ಭೇಟಿ ನೀಡಿ ಎಂಆರ್ಪಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಗುರುವಾರ ಬೆಳಿಗ್ಗೆ ವಜಾಗೊಳಿಸಿದ 57 ಮಂದಿಗೆ ಕೆಲಸಕ್ಕೆ ಹಾಜರಾಗಲು ಪಾಸ್ ನೀಡಬೇಕು ಇಲ್ಲದಿದ್ದಲ್ಲಿ ಹಗಲು-ರಾತ್ರಿ ನೌಕರರ ಉಪವಾಸ ಪ್ರತಿಭಟನೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ಹೊಸ ದಿಲ್ಲಿಯಲ್ಲಿರುವ ಎಂಆರ್ಪಿಎಲ್ ನಿರ್ದೇಶಕ ಎಂ ವೆಂಕಟೇಶ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಕಾರ್ಮಿಕರ ಮರುಸೇರ್ಪಡೆಗೆ ಪಟ್ಟುಹಿಡಿದರು. ಬುಧವಾರ ರಾತ್ರಿ ಮಳೆಯ ನಡುವೆಯೂ ಪ್ರತಿಭಟನೆ ಮುಂದುವರೆದಿದೆ
ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ, ದ ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರ್ ಕಟೀಲ್, ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾದ ಅಧ್ಯಕ್ಷರಾದ ರಾಜೇಶ ಅಮೀನ್, ಕೆಂಜಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜಯ ಕೋಟ್ಯಾನ್, ಬಾಳ ಪಂಚಾಯತಿ ಅಧ್ಯಕ್ಷರಾದ ಹುಲಿಯಮ್ಮ ಮತ್ತಿತರರು ಭಾಗವಹಿಸಿದ್ದರು.
Kshetra Samachara
25/11/2021 08:16 am