ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: "ಮೋದಿ ಸರಕಾರದ ಗರ್ವಭಂಗ"; ಕಾಂಗ್ರೆಸ್ ವಿಜಯೋತ್ಸವ

ಪುತ್ತೂರು: ದೇಶದ ಕೋಟ್ಯಂತರ ರೈತರ ಬೆನ್ನೆಲುಬು ಮುರಿಯುವಂತಹ ಕೃಷಿ ಕಾಯಿದೆಗಳನ್ನು ತಂದ ನರೇಂದ್ರ ಮೋದಿ ಸರಕಾರ, ಇದೀಗ ರೈತ ಸಮುದಾಯದ ಆಕ್ರೋಶ ಎದುರಿಸಲಾಗದೆ ಮಸೂದೆ ಹಿಂದಕ್ಕೆ ಪಡೆದಿದೆ. ಈ ಮೂಲಕ ಮೋದಿ ಸರಕಾರದ ಗರ್ವಭಂಗವಾಗಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಹೇಳಿದರು.

ಮೂರು ಕೃಷಿ ಮಸೂದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಇಂದು ಪುತ್ತೂರು ಬಸ್ ನಿಲ್ದಾಣ ಬಳಿಯ ಗಾಂಧಿಕಟ್ಟೆ ಎದುರು ನಡೆದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರನ್ನು 56 ಇಂಚಿನ ಎದೆಯ ವ್ಯಕ್ತಿ ಎಂದು ಬಿಂಬಿಸುತ್ತಾ ಬರಲಾಗಿತ್ತು. ಆದರೆ, ಇಡೀ ರೈತ ಸಮುದಾಯ ಒಗ್ಗಟ್ಟಾಗಿ ಮಾಡಿದ ನಿರಂತರ ಚಳವಳಿ ಕಂಡು 56 ಇಂಚಿನ ಎದೆಯ ಮೋದಿ ಹೆದರಿ ಕಂಗಾಲಾಗಿದ್ದು, ಅವರ ಎದೆ ಈಗ 26 ಇಂಚಿಗೆ ಕುಸಿದಿದೆ. ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ ಎಂಬುದು ಮೋದಿ ಅವರಿಗೆ ಈಗ ಅರ್ಥವಾಗಿದೆ.

ಸ್ವಾತಂತ್ರ್ಯಾನಂತರ ನಡೆದ 2 ನೇ ಅತಿದೊಡ್ಡ ಚಳವಳಿ ಇದಾಗಿತ್ತು. ಇಡೀ ದೇಶವೇ ತನ್ನ ವಿರುದ್ಧ ತಿರುಗಿ ಬಿದ್ದಿದೆ ಎಂದು ಗೊತ್ತಾದ ಬಳಿಕ ಮೋದಿ ಅವರು ಮಸೂದೆ ಹಿಂಪಡೆಯುವ ಘೋಷಣೆ ಮಾಡಿದ್ದಾರೆ. ಇದು ಸಂವಿಧಾನಕ್ಕೆ, ದೇಶದ ರೈತ ಸಮುದಾಯಕ್ಕೆ ಸಿಕ್ಕ 'ಮಹಾ ವಿಜಯ' ಎಂದರು.

Edited By : Nagesh Gaonkar
Kshetra Samachara

Kshetra Samachara

19/11/2021 05:32 pm

Cinque Terre

8.13 K

Cinque Terre

1

ಸಂಬಂಧಿತ ಸುದ್ದಿ