ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗೋವಿನ ಮೇವಿಗಾಗಿ ನ.14ರಂದು ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ, ಗೋಪೂಜೆ

ಮಂಗಳೂರು: ನಗರದ ಪಜೀರು ಗೋಶಾಲೆಯಲ್ಲಿ ನವೆಂಬರ್ 14ರಂದು ಸಾರ್ವಜನಿಕ ಗೋಪೂಜೆ ಮತ್ತು ಗೋವಿನ ಮೇವಿಗಾಗಿ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮವು ನಡೆಯಲಿದೆ. ಅಂದು ಮಧ್ಯಾಹ್ನ 2ಕ್ಕೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದ ಹೊರೆಕಾಣಿಕೆಯು ನಗರದ ಕದ್ರಿ ದೇವಸ್ಥಾನದಿಂದ ಗೋಶಾಲೆಗೆ "ಗೋಕಾಣಿಕಾ ಮೆರವಣಿಗೆ' ನಡೆಯಲಿದೆ ಎಂದು ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.

ಈ ಬಗ್ಗೆ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ಪಜೀರು ಗೋಶಾಲೆಯ ವಠಾರದಲ್ಲಿ ಗೋಭಕ್ತರ ಹೊರೆಕಾಣಿಕೆ ಜಾಥಾದ ಅಭೂತಪೂರ್ವ ಸಂಗಮಗೊಳ್ಳಲಿದೆ. ಸಂಜೆ 5:30ಕ್ಕೆ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ ನಡೆಯಲಿದೆ. ಮಂಗಳೂರಿನಿಂದ 22 ಕಿ.ಮೀ. ದೂರದ ಪಜೀರಿನಲ್ಲಿರುವ 10 ಎಕರೆ ವಿಶಾಲ ಜಾಗದಲ್ಲಿ ಈ ಗೋಶಾಲೆ ಇದ್ದು, ಇಲ್ಲಿ ನಿರ್ಗತಿಕ, ಕಟುಕರ ಕೈಯಿಂದ ರಕ್ಷಿಸಿರುವ ಗೋವುಗಳನ್ನು ಈ ಗೋಶಾಲೆಯಲ್ಲಿ ಸಾಕಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 8 ಲಕ್ಷ ರೂ.ಯಷ್ಟು ಆಗಾಧ ಮೊತ್ತವನ್ನು ದಾನಿಗಳಿಂದ ಮತ್ತು ಗೋಪೇಮಿಗಳಿಂದ ಸಂಗ್ರಹಿಸಿ ಗೋವುಗಳನ್ನು ಪ್ರೀತಿಯಿಂದ ಉಳಿಸಿ, ಬೆಳೆಸಲಾಗುತ್ತದೆ ಎಂದರು

ಗೋವುಗಳ ಉಳಿವಿಗಾಗಿ ವಿಎಚ್ ಪಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಗೋವುಗಳ ಪೋಷಣೆ ಪಾಲನೆಯ ನಿಟ್ಟಿನಲ್ಲಿ ಕಳೆದ 21 ವರ್ಷಗಳಿಂದ ವಿಎಚ್ ಪಿ ನೇತೃತ್ವದಲ್ಲಿ ಗೋವನಿತಾಶ್ರಯ ಟ್ರಸ್ಟ್ ನ ಹೆಸರಿನಲ್ಲಿ ಗೋಶಾಲೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಸುಮಾರು 400 ಕ್ಕೂ ಹೆಚ್ಚು ದನಕರುಗಳನ್ನು ಸಾಕಲಾಗುತ್ತಿದೆ ಎಂದು ಶರಣ್ ಪಂಪ್ ವೆಲ್ ಹೇಳಿದರು

Edited By : Nagesh Gaonkar
Kshetra Samachara

Kshetra Samachara

11/11/2021 06:59 pm

Cinque Terre

6.67 K

Cinque Terre

0

ಸಂಬಂಧಿತ ಸುದ್ದಿ