ಉಡುಪಿ: ಇಂದು ಉಡುಪಿಯಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ ಉಡುಪಿ ಜಿಲ್ಲೆಯ ರೈತ ಮುಖಂಡರು ತಮ್ಮ ಅಹವಾಲು, ಸಂಕಷ್ಟವನ್ನು ಸಚಿವರ ಮುಂದೆ ತೋಡಿಕೊಂಡರು.
ಮುಖ್ಯವಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ, ಕೃಷಿಗೆ ಕಾಡುಪ್ರಾಣಿಗಳ ಹಾವಳಿ ಮತ್ತು ಜಿಲ್ಲೆಯ ಹೊಸ ತಳಿಯ ಭತ್ತ ಖರೀದಿ ಮುಂತಾದ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು. ಇದಕ್ಕೆ ಸ್ಪಂದಿಸಿದ ಸಚಿವರು, ಉಡುಪಿ ಜಿಲ್ಲೆಯ ರೈತರ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಬಗ್ಗೆ ರಾಜ್ಯ ಕೃಷಿ ಸಚಿವರ ಜೊತೆ ಮಾತನಾಡಿ, ಸಮಗ್ರ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.
ಇನ್ನು, ಭತ್ತಕ್ಕೆ ಕ್ವಿಂಟಾಲ್ ಗೆ ಕೇಂದ್ರ ಸರಕಾರ 1940 ರೂ. ನಿಗದಿ ಮಾಡಿದೆ. ದೇಶದಲ್ಲಿ ಭತ್ತ ಕೊಯ್ಲು ಅವಧಿ ಭಿನ್ನವಾಗಿರುತ್ತವೆ. ರಾಜ್ಯದಲ್ಲಿ ನವೆಂಬರ್, ಡಿಸೆಂಬರ್, ಜನವರಿ ಹೊತ್ತಿಗೆ ಭತ್ತ ಕೊಯ್ಲು ಪ್ರಾರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ. ರಾಜ್ಯ ಸರಕಾರ ಶೀಘ್ರ ಕೇಂದ್ರಗಳನ್ನು ಪ್ರಾರಂಭಿಸುವ ಭರವಸೆ ಇದೆ ಎಂದರು.
Kshetra Samachara
04/11/2021 07:21 pm