ಉಡುಪಿ: ನಾಳೆಯ ಉಪಚುನಾವಣೆ ಫಲಿತಾಂಶ ಬಿಜೆಪಿ ಪರ ಬರಲಿದ್ದು ರಾಜ್ಯದ ಜನರಿಗೆ ಆಶಾದಾಯಕವಾಗಲಿದೆ ಮತ್ತು ಕಾಂಗ್ರೆಸ್ ಪಾಲಿಗೆ ನಿರಾಶೆಯ ಫಲಿತಾಂಶ ಆಗಲಿದೆ ಎಂದು ಸಚಿವ ಸುನಿಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ,ಉಪಚುನಾವಣೆ ಬಗ್ಗೆ ಡಿ.ಕೆ ಶಿವಕುಮಾರ್ ಇದು ಮುಂದಿನ ಚುನಾವಣೆಯ ದಿಕ್ಸೂಚಿ ಅಲ್ಲ ಎಂದು ಹೇಳುವ ಮೂಲಕ ಪ್ರಾರಂಭದಲ್ಲೇ ಸೋಲನ್ನು ಒಪ್ಪಿಕೊಂಡಿದ್ದಾರೆ.ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ.ಎರಡೂ ಕಡೆ ನಮ್ಮ ಗೆಲುವು ನಿಶ್ಚಿತ. ಮತ್ತು ನಾಳೆಯ ಫಲಿತಾಂಶ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ದಿಕ್ಸೂಚಿಯಾಗಲಿದೆ.ರಾಜ್ಯದ ಜನ ಬಿಜೆಪಿಯ ಎರಡು ವರ್ಷದ ಆಡಳಿತ ಮೆಚ್ಚಿ ಮತ ಹಾಕಿದ್ದು ಎರಡೂ ಕಡೆ ನಮ್ಮ ಪರ ಫಲಿತಾಂಶ ಬರಲಿದೆ ಎಂದು ಹೇಳಿದರು.
Kshetra Samachara
01/11/2021 11:26 am