ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಮತ್ತೊಮ್ಮೆ ಕನ್ನಡ ನಾಡು, ನುಡಿ ಸೇವೆಗೆ ಸಹಕಾರ ನೀಡಿ"; ವ.ಚ. ಚನ್ನೆಗೌಡ

ಉಡುಪಿ: ನವೆಂಬರ್ 21ರಂದು ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ವ.ಚ. ಚನ್ನೆಗೌಡ ಸ್ಪರ್ಧಿಸುತ್ತಿದ್ದು, ತಮ್ಮ ಕಾರ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ೨೦೧೬ರಿಂದ ೨೦೨೦ರ ವರೆಗೆ ಸೇವೆ ಸಲ್ಲಿಸುವ ಸದವಕಾಶವನ್ನು ನಾಡೋಜ ಡಾ.ಮನು ಬಳಿಗಾರ್ ಒದಗಿಸಿಕೊಟ್ಟರು. ಅದು ಕನ್ನಡ

ಸಾಂಸ್ಕೃತಿಕ ವಲಯದಲ್ಲಿ ನಾನು ಮತ್ತಷ್ಟು ತೊಡಗಿಸಿಕೊಳ್ಳಲು ನೆರವಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಬಂದ ಗೌರವ ಧನ ಏಳು ಲಕ್ಷದ ಇಪ್ಪತ್ತು ಸಾವಿರ

ರೂ.ವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 'ಕನ್ನಡ ಕಾಯಕ ದತ್ತಿ' ಪ್ರಶಸ್ತಿ ಸ್ಥಾಪಿಸಿ,ಕನ್ನಡ ಪರ ಹೋರಾಟಗಾರರಿಗೆ, ಕನ್ನಡ ನಾಡು-ನುಡಿ ಕುರಿತು ರಚಿತವಾದ ಕೃತಿಕಾರರಿಗೆ, ಕನ್ನಡ ರಂಗಭೂಮಿ ಕಲಾವಿದರಿಗೆ ತಲಾ ಹತ್ತು ಸಾವಿರ ರೂ.ನ ಪ್ರಶಸ್ತಿ ಪ್ರತಿವರ್ಷ ನೀಡುವಂತೆ ಮಾಡಿದ್ದೇನೆ. ಕನ್ನಡ ನಾಡು-ನುಡಿ ಕುರಿತ ನಾಲ್ಕು ಕೃತಿಗಳನ್ನು ಕೂಡ ರಚಿಸಿದ್ದೇನೆ. ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಅವರ ಹೆಸರಿನಲ್ಲಿ 'ಹನಿಗವನ ಸಾಹಿತ್ಯ' ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ಈ ಎಲ್ಲ ಅನುಭವವನ್ನು ಬಳಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಹಕಾರ

ಹಾಗೂ ಮಾರ್ಗ ದರ್ಶನದೊಂದಿಗೆ ಇನ್ನಷ್ಟು ವ್ಯಾಪಕ ನೆಲೆಯಲ್ಲಿ ಕನ್ನಡ ಕಾಯಕ ಮಾಡುವ ಆಶಯ

ಹೊಂದಿದ್ದೇನೆ ಎಂದರು. ಕೇಂದ್ರ ಸರ್ಕಾರ / ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಕನ್ನಡಿಗರು ಪಡೆಯಲು ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವುದು, ರಾಜ್ಯದ ಗಡಿಭಾಗಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನಿರ್ದಿಷ್ಟ ಕಾರ್ಯಯೋಜನೆ ಮಾಡುವುದು. 'ಕನ್ನಡ ಬೆಂಗಳೂರು-ಸುಂದರ ಬೆಂಗಳೂರು' ಆಂದೋಲನ ರೂಪಿಸಿ ಹೋರಾಟ ನಡೆಸುವುದು... ಹೀಗೆ ಹಲವು ಕಾರ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು.

Edited By : Nagesh Gaonkar
Kshetra Samachara

Kshetra Samachara

26/10/2021 07:59 pm

Cinque Terre

8.93 K

Cinque Terre

0

ಸಂಬಂಧಿತ ಸುದ್ದಿ