ಉದ್ಯಾವರ: ಉಡುಪಿಯ ಉದ್ಯಾವರ ಗ್ರಾಮ ಪಂಚಾಯತ್‌ನ ನಿಷ್ಕ್ರಿಯತೆ ಹಾಗೂ ಪಂಚಾಯತ್‌ಗೆ ಕಾಯಂ ಪಿಡಿಒ ನೇಮಕ ಮಾಡುವಂತೆ ಆಗ್ರಹಿಸಿ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವ ವಹಿಸಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿನಯ ಕುಮಾರ್ ಸೊರಕೆ, ಕಾಪು ತಾಲೂಕಿನ ಐದು ಗ್ರಾಮ ಪಂಚಾಯತ್ ನಲ್ಲಿ ಕಾಯಂ ಪಿಡಿಒ ನೇಮಕವಾಗಿಲ್ಲ. ಪಿಡಿಒ ನೇಮಕ ಮಾಡದೇ ತಾಲೂಕಿನ ಅಭಿವೃದ್ಧಿ ಹೇಗೆ ಸಾಧ್ಯ? ಗ್ರಾಮ ಪಂಚಾಯತ್‌ನಲ್ಲಿರುವ ಬಿಜೆಪಿ ಸದಸ್ಯರು ಉದ್ಯಮಿಗಳ ಜೊತೆ ಕೈ ಜೋಡಿಸಿ, ಕಾಯಂ ಪಿಡಿಒ ನೇಮಕವಾಗಲು ಬಿಡುತ್ತಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
26/10/2021 02:12 pm