ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಜಿ ಎಂಎಲ್ ಸಿ ಐವನ್ ಡಿಸೋಜ ಮನೆಗೆ ಭಜರಂಗದಳ ಮುತ್ತಿಗೆ ಯತ್ನ

ಮಂಗಳೂರು: ಮಾಜಿ ಎಂಎಲ್ ಸಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಅವರ ಮಂಗಳೂರಿನ ಜೆಪ್ಪು ವೆಲೆನ್ಸಿಯಾದಲ್ಲಿರುವ ಮನೆಗೆ ಭಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ನಡೆದಿದೆ.

"ಕೇಸರಿ ಬಟ್ಟೆ ಹಾಕಿ ಭಜರಂಗದಳ ಕಾರ್ಯಕರ್ತರು ಅನೈತಿಕ ವರ್ತನೆ, ಸುಲಿಗೆ, ಸಮಾಜದ್ರೋಹಿ ಕೃತ್ಯ ಮಾಡ್ತಿದ್ದಾರೆ" ಎಂದು ಐವನ್ ಡಿಸೋಜ ಹೇಳಿಕೆಯನ್ನು ಖಂಡಿಸಿ ಐವನ್ ಮನೆಗೆ ನುಗ್ಗಲು ಕಾರ್ಯಕರ್ತರು ಯತ್ನಿಸಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಭಜರಂಗದಳ ಕಾರ್ಯಕರ್ತರ ಮಧ್ಯೆ ನೂಕಾಟ, ತಳ್ಳಾಟ ನಡೆದಿದೆ. ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Edited By : Shivu K
Kshetra Samachara

Kshetra Samachara

20/10/2021 02:19 pm

Cinque Terre

10.49 K

Cinque Terre

19

ಸಂಬಂಧಿತ ಸುದ್ದಿ