ಬಜಪೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ತಿರುವೈಲ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ನೆರವೇರಿಸಿದರು.
ಈ ವೇಳೆ ಅವರು ಅಕ್ಷರ ವಾಹಿನಿ ಶಾಲಾ ವಾಹನವನ್ನು ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಲೋಕಾರ್ಪಣೆ ಹಾಗೂ ಆಂಗ್ಲ ಮಾಧ್ಯಮ ತರಗತಿ ಹಾಗೂ ಶಾಲಾ ವಾಹನ ತಂಗುದಾಣವನ್ನು ಉದ್ಘಾಟಿಸಿದರು. ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ತಿರುವೈಲ್ ವಾರ್ಡ್ ಕಾರ್ಪೋರೇಟರ್ ಹೇಮಲತಾ ರಘು ಸಾಲಿಯಾನ್, ಬಾಲಕೃಷ್ಣ ಭಟ್ ತಿರುವೈಲ್ ಜಗದೀಶ್ ಶೇಣವ, ವಂದನೀಯ ಜೇಮ್ಸ್ ಡಿಸೋಜಾ, ಹಸನ್ ಮುಬಾರಕ್ ಸಖಾಫಿ ಇದ್ದರು.
Kshetra Samachara
27/09/2021 09:13 pm