ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಡಾ. ವಿ. ಎಸ್ ಆಚಾರ್ಯ ಹೆಸರು ಇಡಬೇಕು: ಶಾಸಕ ರಘುಪತಿ ಭಟ್

ಉಡುಪಿ: ಉಡುಪಿ ನಗರದ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಡಾ. ವಿ ಎಸ್ ಆಚಾರ್ಯ ಅವರ ಹೆಸರು ಇಡಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ. ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ "ಉಡುಪಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ" ಎಂದು ಕಟ್ಟಡ ನಿರ್ಮಾಣದ ಇಂಜಿನಿಯರ್‌ಗಳು ಬೋರ್ಡ್ ತಯಾರು ಮಾಡಿದ್ದರು.

ಇದಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಬೋರ್ಡ್ ಅಳವಡಿಸಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಡಾ. ವಿ ಎಸ್ ಆಚಾರ್ಯ ಅವರ ಕೊಡುಗೆ ಮಹತ್ವದ್ದು. ಸಾರ್ವಜನಿಕವಾಗಿ ಬಳಸಲ್ಪಡುವ ಬಸ್ ನಿಲ್ದಾಣಕ್ಕೆ ಆಚಾರ್ಯರ ಹೆಸರು ಸೂಕ್ತ ಎಂದು ಶಾಸಕರು ಹೇಳಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರ ಬಳಿ ಮಾತುಕತೆ ಮಾಡುವುದಾಗಿ ಶಾಸಕ ರಘುಪತಿ ಭಟ್ ಹೇಳಿದರು.

Edited By : PublicNext Desk
Kshetra Samachara

Kshetra Samachara

22/09/2021 04:36 pm

Cinque Terre

12.69 K

Cinque Terre

2

ಸಂಬಂಧಿತ ಸುದ್ದಿ