ಮಂಗಳೂರು: ಸರಕಾರದ ವಿರುದ್ಧ ವಿವಾದಾತ್ಮಕ ಹೇಳಿಕೆಗೆ ನೀಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ವೀಡಿಯೋ ಮಾಡಿ ಕ್ಷಮೆಯಾಚನೆ ಮಾಡಿದ್ದಾರೆ.
ನಿನ್ನೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಾಂಧೀಜಿಯವರ ಹಿಂದುತ್ವದ ವಿರೋಧ ನೀತಿಯ ಕುರಿತು ತಾನು ಮಾತಾಡಿದ್ದೇನೆಯೇ ಹೊರತು, ಯಾರಿಗೂ ಬೆದರಿಕೆ ಒಡ್ಡಿಲ್ಲ. ನನ್ನ ಹೇಳಿಕೆಯಲ್ಲಿ ಹತ್ಯೆ ಎಂಬ ಶಬ್ದವು ಅಸಾಂವಿಧಾನಿಕವೆನಿಸಿದ್ದಲ್ಲಿ ಆ ವಿಚಾರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಧರ್ಮ ರಕ್ಷಣೆಯ ವಿಚಾರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಯಾವಾಗಲೂ ಮುಂದೆ ನಿಲ್ಲುತ್ತದೆ ಎಂಬುದು ನನ್ನ ಮಾತಿನ ಅರ್ಥ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ವಿವಾದ ಹೇಳಿಕೆ ನೀಡಿ ಅವರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಧರ್ಮೇಂದ್ರ ವೀಡಿಯೋ ಮಾಡಿ ಕ್ಷಮೆ ಕೋರಿದ್ದಾರೆ.
Kshetra Samachara
19/09/2021 04:41 pm