ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಜೆಸಿಬಿ, ಹಿತಾಚಿ, ಟಿಪ್ಪರ್ ಬಾಡಿಗೆ ಪರಿಷ್ಕರಣೆ

ಮೂಡುಬಿದಿರೆ: ಪೆಟ್ರೋಲ್, ಡಿಸೇಲ್ ಬೆಲೆಏರಿಕೆ, ನಿರ್ವಹಣಾ ವೆಚ್ಚ ಹಾಗೂ ಚಾಲಕರ ವೇತನದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜೆಸಿಬಿ, ಹಿತಾಚಿ ಮತ್ತು ಟಿಪ್ಪರ್ ಬಾಡಿಗೆಯನ್ನು ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪರಿಷ್ಕರಣೆ ಮಾಡಲಾಗಿದೆ ಎಂದು ಜೆಸಿಬಿ, ಹಿತಾಚಿ ಮತ್ತು ಟಿಪ್ಪರ್ ಮಾಲೀಕರ ಸಂಘ ಹೇಳಿದೆ.

ಮೂಡುಬಿದಿರೆ, ಕಾರ್ಕಳ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕುಗಳನ್ನೊಳಗೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದ ಸಂಘದ ಅಧ್ಯಕ್ಷ ವಿನಾಯಕ ಹೆಗಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2010ರಲ್ಲಿ ಡಿಸೇಲ್ ದರ ಲೀಟರ್‌ಗೆ ರೂ.48 ಇದ್ದು ಈಗ ಲೀಟರ್‌ಗೆ ರೂ 93 ಆಗಿದೆ. ಹಿತಾಚಿ, ಟಿಪ್ಪರ್, ಜೆಸಿಬಿ ಬಾಡಿಗೆ ಮಾತ್ರ ಹತ್ತು ವರ್ಷದಿಂದ ಬದಲಾಗಲಿಲ್ಲ. ಆದರೆ ಈ ಅವಧಿಯಲ್ಲಿ ಎಲ್ಲಾ ರೀತಿಯ ಖರ್ಚು, ವೆಚ್ಚಗಳು ದುಪ್ಪಟ್ಟಾಗಿವೆ. ಏತನ್ಮಧ್ಯೆ ಸರಿಯಾದ ಬಾಡಿಗೆ ಇಲ್ಲದೆ ಟಿಪ್ಪರ್, ಹಿತಾಚಿ ಮಾಲಕರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ಇವುಗಳ ಬಾಡಿಗೆ ದರವನ್ನು ಪರಿಸ್ಕರಿಸಲಾಗಿದೆ ಎಂದರು.

ಹಿತಾಚಿ ಬಾಡಿಗೆ ಈ ಹಿಂದೆ ಗಂಟೆಗೆ ರೂ 1000 ಇದ್ದು ಪರಿಷ್ಕೃತ ದರ ರೂ 1300ಕ್ಕೆ ಹೆಚ್ಚಿಸಲಾಗಿದೆ. ಜೆಸಿಬಿ ಗಂಟೆಗೆ ಹಳೆ ಬಾಡಿಗೆ ರೂ 900ನ್ನು ಪರಿಷ್ಕರಿಸಿ ರೂ 1200ಕ್ಕೆ ಹೆಚ್ಚಿಸಲಾಗಿದೆ. ಟಿಪ್ಪರ್ ಗಂಟೆಯ ಬಾಡಿಗೆಯನ್ನು ರೂ 600ರಿಂದ 800ಕ್ಕೇರಿಸಲಾಗಿದ್ದು ದಿನದ ಬಾಡಿಗೆಯನ್ನು 5000ದಿಂದ ರೂ 7000ಕ್ಕೆ ಏರಿಕೆ ಮಾಡಲಾಗಿದೆ ಎಂದರು. ಪೆಟ್ರೋಲ್, ಡಿಸೇಲ್ ದರ ಮತ್ತು ವಾಹನಗಳ ನಿರ್ವಹಣಾ ವೆಚ್ಚವನ್ನು ನೋಡಿಕೊಂಡು ಪ್ರತಿವರ್ಷ ಬಾಡಿಗೆ ದರವನ್ನು ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಖೇಶ್ ಶೆಟ್ಟಿ, ಉಪಾಧ್ಯಕ್ಷರುಗಳಾದ ರಂಜಿತ್ ಪೂಜಾರಿ, ರೋಹನ್, ಗಂಗಾಧರ, ಕಾರ್ಯದರ್ಶಿ ಪ್ರಸನ್ನ, ಗೌರವ ಸಲಹೆಗಾರ ಆದಿರಾಜ ಜೈನ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

13/09/2021 06:01 pm

Cinque Terre

14.2 K

Cinque Terre

0

ಸಂಬಂಧಿತ ಸುದ್ದಿ