ಉಡುಪಿ: ಮತಾಂತರ ನಡೆಯುತ್ತಿದೆ ಅಂತ ಆರೋಪಿಸಿ ಹಿಂದೂ ಜಾಗರಣ ವೇದಿಕೆ ಪ್ರಾರ್ಥನಾಲಯಕ್ಕೆ ದಾಳಿ ಮಾಡಿದ್ದನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಖಂಡಿಸಿದ್ದಾರೆ.
ಕಾರ್ಕಳ ಘಟನೆ ಸರ್ಕಾರ ಇಲ್ಲ, ಕಾನೂನು ಇಲ್ಲ ಎಂಬುದಕ್ಕೆ ದೊಡ್ಡ ಉದಾಹರಣೆ ಎಂದಿರುವ ಅವರು,ಕಾನೂನು ಕೈಗೆತ್ತಿಕೊಳ್ಳುವ ಬದಲು, ಕಾನೂನು ಪ್ರಕಾರ ಮಾಡಬೇಕಿತ್ತು.ಕಾನೂನು ಉಲ್ಲಂಘನೆ ಆಗಿದ್ರೆ ಅದರ ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು.ಕೇಂದ್ರ , ರಾಜ್ಯದಲ್ಲಿ ಇವರದ್ದೇ ಸರ್ಕಾರ ಇದೆ.ಉಸ್ತುವಾರಿ ಸಚಿವರು ಕೂಡ ಕಾರ್ಕಳದವರೇ.ಆದರೂ ಈ ರೀತಿಯಲ್ಲಿ ಏಕಾಏಕಿ ದಾಳಿ ಮಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
ವಾಸ್ತವವಾಗಿ ಏನು ನಡೆದಿದೆ ಅಂತ ವಿಮರ್ಶೆ ಮಾಡಬೇಕು.ಪ್ರಾರ್ಥನೆ ಸೇರಿದ್ದಾರೆ ಅಂತ ಉಲ್ಲೇಖ ಆಗಿದೆ.ಎಲ್ಲ ಕಡೆ ಈ ರೀತಿ ಆದ್ರೆ, ಯಾಕೆ ಕಾನೂನು, ಯಾಕೆ ಉಸ್ತುವಾರಿ ಸಚಿವರು? ಎಂದು ಕಾರ್ಕಳ ಘಟನೆ ಬಗ್ಗೆ ಮಾಜಿ ಸಚಿವ ವಿಜಯ್ ಕುಮಾರ್ ಸೊರಕೆ ಆಕ್ರೋಶ ಹೊರ ಹಾಕಿದ್ದಾರೆ.
Kshetra Samachara
13/09/2021 01:51 pm