ಬಂಟ್ವಾಳ: ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರ ಪೈಕಿ ಈಗಾಗಲೇ 450ಕ್ಕೂ ಹೆಚ್ಚು ಕಾರ್ಮಿಕರಿಗೆ ಕಿಟ್ ಅನ್ನು ಗ್ರಾಪಂ ವತಿಯಿಂದ ವಿತರಿಸಲಾಗಿದೆ ಎಂದು ನರಿಕೊಂಬು ಗ್ರಾಪಂ ಅಧ್ಯಕ್ಷೆ ವಿನುತಾ ಪುರುಷೋತ್ತಮ್ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಸಿ ಅಂಗಡಿಯಲ್ಲಿ ಕಿಟ್ ಪತ್ತೆಯಾಗಿದೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್ ಮಾಡುತ್ತಿದ್ದು, ಇದನ್ನು ಪಂಚಾಯಿತಿ ಆಡಳಿತ ಮತ್ತು ಬಿಜೆಪಿ ಖಂಡಿಸುತ್ತದೆ, ಶೇಡಿಗುರಿಯಲ್ಲಿರುವ ಸೇವಾ ಕೇಂದ್ರದಲ್ಲಿ ಕಿಟ್ ದಾಸ್ತಾನಿಟ್ಟಿದ್ದೇ ಹೊರತು, ಅಂಗಡಿಯಲ್ಲಲ್ಲ ಎಂದರು. ಯಾರೋ ಕಿಡಿಗೇಡಿಗಳು ವೀಡಿಯೋ ಚಿತ್ರೀಕರಿಸಿ ಬಳಿಕ ಅದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದ ಅವರು, ಕಿಟ್ ಅನ್ನು ಪಡೆದವರಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರೂ ಇದ್ದಾರೆ ಎಂದರು. ಪ್ರಮುಖರಾದ ಯಶೋಧರ ಕರ್ಬೆಟ್ಟು, ಪುರುಷೋತ್ತಮ ಸಾಲಿಯಾನ್, ಪ್ರೇಮನಾಥ ಶೆಟ್ಟಿ ಬಾಳ್ತಿಲ, ಸುರೇಶ್ ಕೋಟ್ಯಾನ್, ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಮುಡಿಮುಗೇರು, ಸದಸ್ಯರಾದ ಕಿಶೋರ್ ಶೆಟ್ಟಿ, ಪುರುಷೋತ್ತಮ ಎಸ್. ಅರುಣ್ ಬೋರುಗುಡ್ಡೆ, ರವಿ ಅಂಚನ್, ಚೇತನ್ ಏಲಬೆ, ರಂಜಿತ್ ಕೆದ್ದೇಲು, ನಾರಾಯಣ ಪೂಜಾರಿ ದರ್ಖಾಸು, ಉಷಾ ರಮಾನಾಥ್, ಮಮತ ಸುಧೀರ್, ಶುಭ ಶಶಿಧರ್, ಚಿತ್ರಾಕ್ಷಿ ಮೊಗರ್ನಾಡು, ಮೋಹಿನಿ ನಾಟಿ, ರತ್ನಾವತಿ ನಿನ್ನಿಪಡ್ಪು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
02/09/2021 04:21 pm