ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೈಲಬೆಲೆ ಏರಿಕೆಗೆ ಅನುಸಾರ ದರ ಪರಿಷ್ಕರಣೆಗೆ ಸರಕಾರಕ್ಕೆ ಟ್ರಕ್ ಮಾಲಕರು ಒತ್ತಾಯ

ಮಂಗಳೂರು: ದಿನೇದಿನೇ ತೈಲಬೆಲೆ ಏರಿಕೆಯಾಗುತ್ತಿದ್ದು, ಆದರೆ ಲಾರಿ, ಟ್ರಕ್ ದರ ಪರಿಷ್ಕರಣೆ ಆಗುತ್ತಿಲ್ಲ. ಏಕ ಮಾದರಿ ದರ ನಿಗದಿ ಪಡಿಸಿ ಕಾಲಕಾಲಕ್ಕೆ ತೈಲಬೆಲೆ ಏರಿಕೆಗೆ ಅನುಸಾರವಾಗಿ ದರ ಪರಿಷ್ಕರಣೆ ಮಾಡಬೇಕೆಂದು ಕರ್ನಾಟಕ ಲಾರಿ ಮಾಲಕರ ಏಜೆಂಟ್ ಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ದರ ಪರಿಷ್ಕರಣೆ ಮಾಡದಿದ್ದಲ್ಲಿ ಖಂಡಿತವಾಗಿ ಲಾರಿ, ಟ್ರಕ್ ಮಾಲಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ‌ ಎಂದರು.

ಸರಕಾರಿ ಒಡೆತನದ ಸಂಸ್ಥೆಯಾದ ಎನ್ಎಂಪಿಟಿಯಲ್ಲಿಯೇ ಟ್ರಕ್, ಲಾರಿಗಳಲ್ಲಿ ಓವರ್ ಲೋಡಿಂಗ್ ದಂಧೆ ನಡೆಯುತ್ತಿದೆ‌. ಸುಪ್ರೀಂ ಕೋರ್ಟ್ ಆದೇಶವಿದ್ದರೂ, ನಿಯಮಗಳನ್ನು ಉಲ್ಲಂಘನೆ ಮಾಡಿ ಓವರ್ ಲೋಡಿಂಗ್ ಮಾಡಿಕೊಂಡು ಟ್ರಕ್, ಲಾರಿಗಳು ಸರಕು ಹೇರಿಕೊಂಡು ರಸ್ತೆಗಿಳಿಯುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆಯಿಂದ ಓವರ್ ಲೋಡ್ ಮಾಡದಂತೆ ನೋಟಿಸ್ ಜಾರಿ ಮಾಡಿದ್ದರೂ, ಈ ದಂಧೆ ಯಥಾ ರೀತಿಯಲ್ಲಿ ಸಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕೆಂದು ಜಿ.ಆರ್.ಷಣ್ಮುಖಪ್ಪ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

16/08/2021 10:40 pm

Cinque Terre

31.37 K

Cinque Terre

1

ಸಂಬಂಧಿತ ಸುದ್ದಿ