ಉಡುಪಿ: ಭಾಷೆ ,ನೆಲ-ಜಲದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡ ಭಾಷೆಯ ಬಗ್ಗೆ ವಿಶೇಷ ಒತ್ತು ಕೊಡಲಾಗುವುದು.ತುಳು ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ. ಭಾಷೆ ಮತ್ತು ಸಂಸ್ಕೃತಿ ಒಟ್ಟಾಗಿ ಸಾಗಬೇಕಾಗಿದೆ. ಎರಡನ್ನೂ ಸಮತೋಲನ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದು ನೂತನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಇಂಧನ ಮತ್ತು ಕನ್ನಡ ಸಂಸ್ಸೃತಿ ಸಚಿವ ಸ್ಥಾನ ಸಿಕ್ಕಿದ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವರು ,ತುಳುಭಾಷೆಗೆ ರಾಜ್ಯಭಾಷೆ ಸ್ಥಾನಮಾನ ಸಿಗಬೇಕು ಎಂಬುದು ಬಹಳ ವರ್ಷಗಳ ಹಿಂದಿನ ಬೇಡಿಕೆಯಾಗಿದೆ.ಇದರಲ್ಲಿರುವ ತೊಡಕು ನಿವಾರಿಸಿ ಒತ್ತಡ ತಂದು ಸ್ಥಾನಮಾನ ಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸರಕಾರದಲ್ಲಿ ಹೊಸತನ ನಿರ್ಮಾಣ ಆಗಬೇಕು ಎಂಬ ಉದ್ದೇಶದಿಂದ ಜವಾಬ್ದಾರಿ ಕೊಟ್ಟಿದ್ದಾರೆ. ಇದೇ ಉದ್ದೇಶದಿಂದ ಎಲ್ಲಾ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೊಸತನದ ರೂಪದಲ್ಲಿ ಕೆಲಸ ಕಾರ್ಯಗಳನ್ನು ನಾವು ಮಾಡುತ್ತೇವೆ.
ಯಾವುದೇ ನಿರೀಕ್ಷೆ, ಬೇಡಿಕೆ, ಒತ್ತಡ ಒತ್ತಾಯ ಹಾಕಿರಲಿಲ್ಲ. ಯಾವುದೇ ಹೊಣೆಗಾರಿಕೆ ಕೊಟ್ಟರೂ ನಿರ್ವಹಿಸುತ್ತೇನೆ ಎಂದಿದ್ದೆ.
ಪಕ್ಷಕ್ಕೆ ಮತ್ತು ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವ ಪ್ರಯತ್ನ ಮಾಡುತ್ತೇನೆ ಎಂದು ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
Kshetra Samachara
07/08/2021 02:15 pm