ಉಡುಪಿ: ನೂತನ ಸಚಿವರಾಗಿ ನಿಯುಕ್ತಿಗೊಂಡಿರುವ ಕೋಟ ಶ್ರೀನಿವಾಸ್ ಪೂಜಾರಿ ,ಗ್ರಾಮೀಣಾಭಿವೃದ್ಧಿ ಖಾತೆ ಅಪೇಕ್ಷಿಸಿದ್ದಾರೆ.ಪತ್ರಕರ್ತರ ಜೊತೆ ಉಡುಪಿಯಲ್ಲಿ ಮಾತನಾಡಿದ ಸಚಿವರು,ಗ್ರಾಮೀಣ ಭಾಗದ ಜನಕ್ಕೆ ಕುಡಿಯುವ ನೀರು ಕೊಡುವ ಆಸೆ ಇದೆ.ಬಡವರಿಗೆ ಮನೆ, ಶೌಚಾಲಯ, ವಿದ್ಯುತ್ ನೀಡಲು ಅನುಕೂಲ ಆಗುವ ಖಾತೆ ಮೇಲೆ ಆಸಕ್ತಿ ಇದೆ.
ವ್ಯಕ್ತಿಯ ಮಾನಸಿಕತೆ ಅರ್ಥ ಮಾಡಿಕೊಂಡು ಸಿಎಂ ಸ್ಥಾನಮಾನ ಕೊಡುತ್ತಾರೆ.ಕೊಟ್ಟ ಖಾತೆಯನ್ನು ಚೆನ್ನಾಗಿ ನಿಭಾಯಿಸುತ್ತೇನೆ.
ಸಚಿವನಾಗಿ ಜನಪರ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಎನ್ ಐಎ ದಾಳಿ ಬಗ್ಗೆ ಗಮನ ಸೆಳೆದಾಗ, ಕರಾವಳಿ ಜಿಲ್ಲೆಗಳನ್ನು ಭಯೋತ್ಪಾದಕರು ತಾಣ ಮಾಡಿಕೊಳ್ಳಲುಯಶಸ್ವಿಯಾಗಿದ್ದಾರೆ. ಭಟ್ಕಳದಿಂದ ಕೇರಳದವರಿಗೆ ಭಯೋತ್ಪಾಧಕ ಚಟುವಟಿಕೆಗಳು ಹಬ್ಬಿವೆ. ಭಯೋತ್ಪಾದಕರಿಗೆ ನೆರವು ಕೊಡುವ ಕೆಲಸ ನಡೆಯುತ್ತಿದೆ. ಎಂತಹ ಸಂದರ್ಭ ಬಂದರೂ ಭಯೋತ್ಪಾದಕರನ್ನು ಮಟ್ಟ ಹಾಕುತ್ತೇವೆ.ಭಯೋತ್ಪಾದಕ ಚಟುವಟಿಕೆ ಮುಕ್ತ ವಾತಾವರಣ ನಿರ್ಮಾಣ ಮಾಡುತ್ತೇವೆ. ಭಯೋತ್ಪಾದಕ ನಿಗ್ರಹ ಕೆಲಸ ಹಿಂದಿನಿಂದಲೂ ರಾಜ್ಯ, ಕೇಂದ್ರ ಸರ್ಕಾರ ಮಾಡುತ್ತಿದೆ. ಮಂಗಳೂರಲ್ಲಿ ಎನ್ ಐ ಎ ಕೇಂದ್ರ ಸ್ಥಾಪಿಸಲು ಸರಕಾರದ ಗಮನಕ್ಕೆ ತರುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
06/08/2021 09:41 pm