ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಬ್ರಹ್ಮಶ್ರೀ' ಪ್ರಶಸ್ತಿಗೆ ಜನಾರ್ದನ ಪೂಜಾರಿಯೇ ಅರ್ಹರು, ನಾನಲ್ಲ; ನಯವಾಗಿ ಪ್ರಶಸ್ತಿ ತಿರಸ್ಕರಿಸಿದ ನಳಿನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಸರಾಗಿರುವ ಏಕೈಕ ವ್ಯಕ್ತಿ ಜನಾರ್ದನ ಪೂಜಾರಿ. ಅವರಷ್ಟು ಎತ್ತರಕ್ಕೆ ಬೆಳೆಯಲು ನನಗಿನ್ನೂ ಬಹಳಷ್ಟು ಕಾಲಾವಕಾಶವಿದೆ.‌ ಹಾಗಾಗಿ ಬ್ರಹ್ಮಶ್ರೀ ಪ್ರಶಸ್ತಿಗೆ ಅರ್ಹ ವ್ಯಕ್ತಿ ತಾನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ.

ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆಯು ನಳಿನ್ ಕುಮಾರ್ ಕಟೀಲು ಅವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ, ಬ್ರಹ್ಮಶ್ರೀ ಪ್ರಶಸ್ತಿಯನ್ನು ನಳಿನ್ ಕುಮಾರ್ ಕಟೀಲು ಅವರಿಗೆ ನೀಡುವುದಕ್ಕೆ ಬಿಲ್ಲವ ಸಂಘಟನೆಗಳಿಂದಲೇ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣ ಅವರ ಬಗ್ಗೆಯೂ ಟೀಕೆಗಳು ಕೇಳಿ ಬಂದಿತ್ತು.

ಈ ಎಲ್ಲ ವಿರೋಧಗಳ ನಡುವೆಯೂ ನಗರದ ತೊಕ್ಕೊಟ್ಟಿನ ಅಂಬಿಕಾ ರೋಡ್ ನಲ್ಲಿರುವ ಗಟ್ಟಿ ಸಮಾಜದಲ್ಲಿ ನಡೆದ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ 'ಮೆರುಗು-2021' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಬ್ರಹ್ಮಶ್ರೀಯಂತಹ ಪ್ರಶಸ್ತಿ ಸ್ವೀಕರಿಸಲು 69 ವರ್ಷ ವಯಸ್ಸು ಕಳೆಯಬೇಕು. ನನಗಿನ್ನೂ 60 ದಾಟಿಲ್ಲ‌. ರಾಜಕೀಯ ಕ್ಷೇತ್ರದಲ್ಲಿ ನಾನು ಇನ್ನಷ್ಟು ಬೆಳೆಯಬೇಕಿದೆ. ಈ ಪ್ರಶಸ್ತಿ ಸ್ವೀಕರಿಸುವಷ್ಟು ನಾನು ಬೆಳೆದಿಲ್ಲ ಎಂಬ ಜಿಜ್ಞಾಸೆ ಮೂಡಿದೆ. ಹಾಗಾಗಿ ಈ ಪ್ರಶಸ್ತಿ ಸ್ವೀಕರಿಸುವುದಿಲ್ಲ. ಒಂದಂತೂ ಸತ್ಯ, ಹಿಂದೂ ಸಂಸ್ಕೃತಿಯಲ್ಲಿ ಅಚಲವಾದ ನಂಬಿಕೆಯುಳ್ಳ ನಾನು ಯಾವುದೇ ಜಾತಿಗೆ ಸೀಮಿತವಾದವನಲ್ಲ. ನಾನು ಮೂರು ಬಾರಿ ಸಂಸದನಾಗುವುದಕ್ಕೆ ಬಿಲ್ಲವ ಸಮುದಾಯವೂ ಕಾರಣ ಎಂದು ನಳಿನ್ ಕುಮಾರ್ ಹೇಳಿದರು.

Edited By : Vijay Kumar
Kshetra Samachara

Kshetra Samachara

01/03/2021 10:21 am

Cinque Terre

16.54 K

Cinque Terre

1

ಸಂಬಂಧಿತ ಸುದ್ದಿ