ಉಡುಪಿ : ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕೇಂದ್ರದ ಜನವಿರೋಧಿ ನೀತಿ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜನಧ್ವನಿ ಪ್ರತಿಭಟನಾ ಪಾದಯಾತ್ರೆ ನಡೆಯಿತು. ಫೆಬ್ರವರಿ 22 ರಿಂದ ಹೆಜಮಾಡಿಯಿಂದ ಆರಂಭಗೊಂಡಿರುವ ಈ ಜನಧ್ವನಿ ಪ್ರತಿಭಟನಾ ಪಾದಯಾತ್ರೆಯು 29 ರಂದು ಬೈಂದೂರಿನಲ್ಲಿ ಸಮಾರೋಪಗೊಳ್ಳಲಿದೆ.
ಈ ಸಂದರ್ಭ ಪ್ರತಿಭಟನೆಯಲ್ಲಿ ಭಾಗಿಯಾದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ಕೇಂದ್ರ ಜನವಿರೋಧಿ ನೀತಿಯಿಂದ ಬಡ ಮತ್ತು ಮಧ್ಯಮ ವರ್ಗ ಕಂಗಾಲಾಗಿದೆ. ಕೊರೋನಾ ಬಳಿಕ ದೇಶ ನಿಧಾನ ಗತಿಯಿಂದ ಎಚ್ಚೆತ್ತುಕೊಳ್ಳುತ್ತಿದೆ. ಆದರೆ ಬೆಲೆ ಏರಿಕೆ ಮತ್ತು ಜನ ವಿರೋಧಿ ನೀತಿಗಳು ಜನರ ಹೈರಾಣಾಗುವಂತೆ ಮಾಡಿದೆ ಎಂದರು. ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕಾಂಗ್ರೆಸ್ ಹಿರಿಯ ಮುಖಂಡರು, ಕಾರ್ಯಕರ್ತ ರು ಭಾಗಿಯಾದರು.
Kshetra Samachara
25/02/2021 05:44 pm