ಉಡುಪಿ: ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ : ಪೇಜಾವರ ಶ್ರೀ ಖಂಡನೆ

ಉಡುಪಿ: ನಂದಕಿಶೋರ್ ನಿರ್ದೇಶನದ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದನ್ನು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಖಂಡಿಸಿದ್ದಾರೆ .

ಚಿತ್ರದ ಅನೇಕ ದೃಶ್ಯಗಳಲ್ಲಿ ಬ್ರಾಹ್ಮಣರನ್ನು ತೀರಾ ಅವಮಾನಿಸಲಾಗಿದ್ದು ಇದರಿಮನದ ಬ್ರಾಹ್ಮಣರ ಭಾವನೆಗಳಿಗೆ ತೀರಾ ನೋವಾಗಿದೆ . ಇಂಥಹ ಬೆಳವಣಿಗೆಗಳು ಅಸಹನೀಯವಾಗಿದೆ . ಕೇವಲ ಬ್ರಾಹ್ಮಣನ್ನು ಮಾತ್ರವಲ್ಲ ಯಾವುದೇ ಜಾತಿ ಸಮುದಾಯಗಳನ್ನು ನಿಂದಿಸುವ ಅವಮಾನಿಸುವ ಪ್ರವೃತ್ತಿ ಸಲ್ಲದು ‌. ಈ ಮೂಲಕ ಮನೋರಂಜನೆ ನೀಡುತ್ತೇವೆ ಅನ್ನೋ ಭ್ರಮೆಯಿಂದ ಚಿತ್ರರಂಗ ಹೊರಬರಬೇಕು . ತಕ್ಷಣ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮಾಜವನ್ನು ನಿಂದಿಸುವ ದೃಶ್ಯಗಳನ್ನು ತೆರವುಗೊಳಿಸಬೇಕು ಎಂದು ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ .

ಈ ವಿಚಾರವಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಅನೇಕ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಅರ್ಪಿಸುವ ಸಂದರ್ಭ ಶ್ರೀಗಳು ಅಲ್ಲಿದ್ದ ಬ್ರಾಹ್ಮಣ ಸಮಾಜದ ಮುಖಂಡರ ಮೊಬೈಲ್ ಮೂಲಕ ಚಲನಚಿತ್ರ ಮಂಡಳಿಯ ಪ್ರಮುಖರೊಂದಿಗೆ ಮಾತನಾಡಿ ಖಂಡನೆಯನ್ನು ವ್ಯಕ್ತಪಡಿಸಿ ಕೂಡಲೇ ವಿವಾದಿತ ದೃಶ್ಯಗಳ ಕತ್ತರಿಗೆ ಒತ್ತಾಯಿಸಿದ್ದಾರೆ.

Kshetra Samachara

Kshetra Samachara

7 days ago

Cinque Terre

9.23 K

Cinque Terre

3

 • Uttam
  Uttam

  ಯಾವುದೇ ಜಾತಿ, ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ರೀತಿಯಲ್ಲಿ ಸಿನೇಮಾ, ನಾಟಕಗಳ ರಚನೆ, ಪ್ರದರ್ಶನ ಖಂಡಿತ ತಪ್ಪು. ಯಾವುದೇ ಜಾತಿಯ ಅವಹೇಳನ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ. ಇಂತಹ ಚಿತ್ರಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲೇಬೇಕು. ಅಂದಾಗ ಮಾತ್ರ ಮುಂದೆ, ಕಲೆಯ ಹೆಸರಿನಲ್ಲಿ ಇಂತಹ ದುರುದ್ದೇಶಪೂರಿತ ಚಿತ್ರಗಳ ತಯಾರಿಕೆಗೆ ಪೂರ್ಣವಿರಾಮ ಬೀಳುವದು. ಆದ್ದರಿಂದ ಈ ಚಿತ್ರವನ್ನು ಬ್ಯಾನ್ ಮಾಡಲೇಬೇಕು.

 • sharath kumar s
  sharath kumar s

  ok swamy avanakkan soolemaklu bare hindu dharmave sigoda ivrige MATTONDU DOUT SWAMY JI NIVU FILM NODTIRA😂😂😂😂😳😳😳😳😳😂😂😂😂😂😂😂

 • B.R.NAYAK
  B.R.NAYAK

  ಬ್ರಾಹ್ಮಣರನ್ನು ಕೀಳು ಮಟ್ಟ ದಲ್ಲಿ ಚಿತ್ರೀಕರಿಸುವ ಮತ್ತು ಅದನ್ನು ಬಿಡುಗಡೆ ಮಾಡುವ ಮೊದಲು ಸೆನ್ಸಾರ್ ಬೋರ್ಡ್ ಸದಸ್ಯರು , ನಮ್ಮ ನಾಡಿನ ,ಹಿಂದೂ ಸಮಾಜಕ್ಕೆ ಅವಮಾನ ಮಾಡುವ ಹಿತದೃಷ್ಟಿ ಯನ್ನ ಹೊಂದಿದವರು ಆಗಿದ್ದರೆಯೇ ಎನ್ನುವ ಪ್ರಶ್ನೆ ಮೂಡಿದೆ.ಸೆನ್ಸರ್ ಬೋರ್ಡ್ ನ ಮಂಡಳಿ ಜವಾಬ್ದಾರಿ ಅರಿತು ,ಇಂತಹ ಸಮಾಜ ವಿರೋಧಿ ಚಿತ್ರಕ್ಕೆ ಅನುಮತಿ ಕೊಡಬಾರದು.ಸೆನ್ಸರ್ ಮಂಡಳಿ ಅಧ್ಯಕ್ಷ ಸದಸ್ಯರ ಸಮರ್ಥನೆ ಯಿಂದ ಆಗಿದ್ದರೆ.ಸೆನ್ಸಾರ್ ಮಂಡಳಿ ಅಧ್ಯಕ್ಷರ ಬೇಜವಾಬ್ದಾರಿ. ಯಿಂದ ಇಂತಹ ಬೆಳವಣಿಗೆಗೆ ಪ್ತೋತ್ಸಹ ದೊರಕಿದಂತಾಗಿದೆ.ಇವರ ಮೇಲೆ ಪ್ರಕರಣ ದಾಖಲಿಸಿ ಅಧ್ಯಕ್ಷರನ್ನು ಶಿಕ್ಷಿಸುವ ಅಗತ್ಯ ಇದೆ.