ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಮಜನ್ಮಭೂಮಿ ಟ್ರಸ್ಟ್ ನ ನಿಧಿ ಸಂಗ್ರಹ ಅಭಿಯಾನದ ತಪ್ಪು ಹುಡುಕುವ ಮಾಜಿ ಸಿಎಂಗಳು ರಾಜ್ಯದ ಜನತೆಯ ಕ್ಷಮೆ ಯಾಚಿಸಲಿ

ಮಂಗಳೂರು: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿರುವ ಅಯೋಧ್ಯೆಯ ರಾಮಜನ್ಮಭೂಮಿ ಟ್ರಸ್ಟ್ ನ ನಿಧಿ ಸಂಗ್ರಹ ಅಭಿಯಾನದ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸೇರಿ ಹಲವು ಅತೃಪ್ತ ಆತ್ಮಗಳು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸುತ್ತಿದೆ. ಆದ್ದರಿಂದ ನಾಡಿನ ಜನತೆಯ ಭಾವನೆಗಳನ್ನು ಅವಮಾನಿಸಿರುವ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಜನತೆಯ ಮುಂದೆ ಬೇಷರತ್ ಕ್ಷಮೆ ಯಾಚಿಸಲಿ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಮಾನಸಿಕತೆ ಬದಲಾಗುತ್ತಿದ್ದು, ಈ ಕಾಲದಲ್ಲಿ ಜನರು, ಸಮಾಜ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.

ಕಾನೂನು ಪದವೀಧರರಾದ ಮಾಜಿಸಿಎಂ ಸಿದ್ದರಾಮಯ್ಯ ಶ್ರೀರಾಮಮಂದಿರ ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ. ಆದ್ದರಿಂದ ತಾನು ದೇಣಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಕಾನೂನಿನ ಕನಿಷ್ಠ ಜ್ಞಾನವಿದ್ದರೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಖಂಡಿಸುತ್ತಿರಲಿಲ್ಲ.

ಸಿದ್ದರಾಮಯ್ಯ ಹಿಂದಿನಿಂದಲೂ ಸಮಾಜದಲ್ಲಿ ವಿಷಬೀಜ ಬಿತ್ತಿ ವೈಷಮ್ಯ ಪ್ರತಿಪಾದಿಸಿ ವರ್ಗಸಂಘರ್ಷವನ್ನು ಸೃಷ್ಟಿ ಮಾಡಿ ತನ್ನ ರಾಜಕೀಯ ಬೇಳೆಕಾಳು ಬೇಯಿಸಿ ರಾಜಕೀಯ ಮಾಡಿದವರು. ಮತ್ತೋರ್ವ ಮಾಜಿ‌ ಸಿಎಂ ಕುಮಾರಸ್ವಾಮಿ ಓಲೈಕೆಯ ರಾಜಕೀಯ ಮಾಡಿದವರು. ಅವರು ಒಂದು ವರ್ಗದ ಓಟ್ ಗಾಗಿ ನಿಧಿ ಸಂಗ್ರಹ ಅಭಿಯಾನ ಪಾರದರ್ಶಕವಾಗಿಲ್ಲ. ಮನೆಗೆ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಹಣ ಕೊಡದಿರುವ ಮನೆಯನ್ನು ಗುರುತಿಸಲಾಗುತ್ತದೆ ಎಂದು ಅಸಂಬದ್ಧವಾಗಿ ಮಾತನಾಡುತ್ತಿದೆ. ಇದು ಖಂಡನೀಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

Edited By : Manjunath H D
Kshetra Samachara

Kshetra Samachara

18/02/2021 04:32 pm

Cinque Terre

9.16 K

Cinque Terre

4

ಸಂಬಂಧಿತ ಸುದ್ದಿ