ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾನು ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ:ಇವತ್ತು ಅಧಿಕಾರ ನನ್ನ ಹಿಂದೆ ಬಂದಿದೆ:ನೂತನ ಸಚಿವ ಎಸ್ ಅಂಗಾರ

ಉಡುಪಿ:ನಾನು ಆರು ಬಾರಿ ಶಾಸಕನಾಗಿದ್ದರೂ ನಾನ್ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ.ಆರು ಅವಧಿಗೆ ಜನರು ನನ್ನನ್ನು ಗೆಲ್ಲಿಸಿದ್ದಾರೆ.ನಾನು ಅಧಿಕಾರದ ಹಿಂದೆ ಹೋಗಿಲ್ಲ, ಈಗ ಅಧಿಕಾರ ನನ್ನ ಹಿಂದೆ ಬಂದಿದೆ ಎಂದು ಬಂದರು ಮತ್ತು ಮೀನುಗಾರಿಕಾ ನೂತನ ಸಚಿವ ಎಸ್ ಅಂಗಾರ ಮಾರ್ಮಿಕವಾಗಿ ಹೇಳಿದ್ದಾರೆ.

ಉಡುಪಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಂಗಾರ, ಇವತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬಂದಿದ್ದೇನೆ.ನನ್ನನ್ನು ಉಡುಪಿಗೆ ಉಸ್ತುವಾರಿ ಸಚಿವನನ್ನಾಗಿ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇವತ್ತು ಧ್ವಜಾರೋಹಣ ಮಾಡಲಷ್ಟೇ ಬಂದಿದ್ದೇನೆ ಎಂದರು.

ಮೀನುಗಾರಿಕೆ ಕುರಿತು ಬಗ್ಗೆ ನನಗೆ ತಿಳಿದುಕೊಳ್ಳಬೇಕಿದೆ ಎಂದ ಅವರು ಇಲಾಖೆಯ ಕುರಿತು,ಮೀನುಗಾರಿಕೆ ಯೋಜನೆಗಳ ಕುರಿತು ಅಧ್ಯಯನ ಮಾಡಬೇಕಿದೆ.ಅದಕ್ಕಿಂತ ಮೊದಲು ಬಂದರುಗಳಿಗೆ ಭೇಟಿ ನೀಡಿ, ಇಲಾಖೆ,,ಮೀನುಗಾರರ ಸಮಸ್ಯೆಗಳು ಮತ್ತು ಕಾರ್ಯಯೋಜನೆಗಳ ಬಗ್ಗೆ ಮೊದಲು ತಿಳಿದುಕೊಂಡು ನಂತರ ಅದನ್ನು ಪರಿಹರಿಸುವ ಕೆಲಸಮಾಡುತ್ತೇನೆ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

26/01/2021 12:13 pm

Cinque Terre

16.25 K

Cinque Terre

1

ಸಂಬಂಧಿತ ಸುದ್ದಿ